ನವದೆಹಲಿ: ವಿದೇಶದಲ್ಲಿ ಮೃತಪಟ್ಟ ಭಾರತೀಯರ ಮೃತದೇಹಗಳನ್ನು ತ್ವರಿತವಾಗಿ ವರ್ಗಾಯಿಸಲು ಸರ್ಕಾರವು ಇ-ಕೇರ್(ಇ-ಕ್ಲಿಯರೆನ್ಸ್ ಫಾರ್ ಆಫ್ಟರ್ ಲೈಫ್ ರಿಮೈನ್ಸ್) ಪೋರ್ಟಲ್ ಅನ್ನು ಪ್ರಾರಂಭಿಸಲಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಮೃತ ಮಾನವನ ಅವಶೇಷಗಳನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಸಾಗಿಸುವಾಗ ವಿಳಂಬವಾಗುವುದನ್ನು ತಪ್ಪಿಸಲು ಪೋರ್ಟಲ್ ಅನ್ನು ಪರಿಚಯಿಸಲಾಗುತ್ತಿದೆ. ಈ ಪೋರ್ಟಲ್ ಮೂಲಕ ಇಮೇಲ್, ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಕೇಂದ್ರೀಯ ಅಂತರಾಷ್ಟ್ರೀಯ ಆರೋಗ್ಯ ವಿಭಾಗ, ನೋಡಲ್ ಅಧಿಕಾರಿ, ಕನ್ಸೈನಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿಯನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಗೊತ್ತುಪಡಿಸಿದ ನೋಡಲ್ ಅಧಿಕಾರಿ 48 ಗಂಟೆಗಳ ಒಳಗೆ ಪರಿಶೀಲನೆ ನಡೆಸಿ ಅನುಮೋದನೆ ಪಡೆಯುತ್ತಾರೆ. ನೋಂದಣಿ ಸಂಖ್ಯೆಯ ಮೂಲಕ ಇ-ಕೇರ್ ಪೋರ್ಟಲ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.