ಮೇ 28ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಲಿದ್ದು, ಈ ಸಮಾರಂಭದ ಸ್ಮರಣಾರ್ಥ ಕೇಂದ್ರ ಹಣಕಾಸು ಸಚಿವಾಲಯ 75 ರೂಪಾಯಿ ಮುಖಬೆಲೆಯ ಹೊಸ ಕಾಯಿನ್ ಬಿಡುಗಡೆಗೊಳಿಸಲು ಮುಂದಾಗಿದೆ.
ಈ ವಿಶೇಷ ನಾಣ್ಯದಲ್ಲಿ ನೂತನ ಪಾರ್ಲಿಮೆಂಟ್ ಭವನದ ಚಿತ್ರವಿರಲಿದ್ದು, ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂಬ ಉಲ್ಲೇಖ ಮಾಡಲಾಗುತ್ತದೆ. ಸರ್ಕಲ್ ಶೇಪ್ ನಲ್ಲಿರುವ ಈ ಕಾಯಿನ್ 44 ಮಿಲಿ ಮೀಟರ್ ವ್ಯಾಸ ಹೊಂದಿರುತ್ತದೆ.
ಸಮ್ಮಿಶ್ರ ಲೋಹಗಳಿಂದ ತಯಾರಿಸಲಾಗುವ ಈ ನಾಣ್ಯದಲ್ಲಿ ಶೇಕಡ 50 ಸಿಲ್ವರ್, ಶೇಕಡ 40 ಕಾಪರ್, ಶೇಕಡ 5 ನಿಕ್ಕಲ್ ಹಾಗೂ ಶೇಕಡ 5 ಜಿಂಕ್ ಬಳಸಲಾಗುತ್ತದೆ. ಅಲ್ಲದೆ ನಾಣ್ಯದಲ್ಲಿ ನೂತನ ಪಾರ್ಲಿಮೆಂಟ್ ಭವನದ ಚಿತ್ರದ ಕೆಳಗೆ 2023 ವರ್ಷ ಸಹ ನಮೂದಿಸಲಾಗುತ್ತದೆ.