2022ರ ಆರ್ಥಿಕ ವರ್ಷದಲ್ಲಿ ಐಡಿಬಿಐ ಬ್ಯಾಂಕ್ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಆರ್.ಬಿ.ಐ. ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಗೆ ಮುಂದಾಗಿದೆ ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆರ್ಬಿಐನ ಇಂಟರ್ನಲ್ ವರ್ಕಿಂಗ್ ಗ್ರೂಪ್ ಬ್ಯಾಂಕಿಂಗ್ ವಲಯದಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಬಲ್ಲ ಕೆಲಸ ಸುಲಭ ನಿಯಮಗಳನ್ನು ಸೂಚಿಸಿತ್ತು.
ಈ ಮಹತ್ವದ ಬದಲಾವಣೆಯ ಅಡಿಯಲ್ಲಿ 1949ರ IWG ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ ಬದಲಾವಣೆ ಮಾಡುವಂತೆ ಹೇಳಲಾಗಿತ್ತು. ಈ ಬದಲಾವಣೆಯ ಮೂಲಕ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಬ್ಯಾಂಕ್ ಮಾಲೀಕತ್ವ ಹೊಂದಲು ಅವಕಾಶ ನೀಡುವುದಾಗಿತ್ತು.
ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್ನ 45.48 ಪ್ರತಿಶತ ಷೇರುಗಳನ್ನ ಮಾರಾಟ ಮಾಡಲು ಮುಂದಾಗಿದೆ. 49.24 ಪ್ರತಿಶತ ಮಾಲೀಕತ್ವ ಹೊಂದಿರುವ ಎಲ್ಐಸಿ ಹೊಸ ಖರೀದಿದಾರರಿಗೆ ಆಡಳಿತ ನಿಯಂತ್ರಣ ವರ್ಗಾವಣೆ ಮಾಡಲು ಉತ್ಸುಕವಾಗಿದೆ.
ಹೊಸ ಖರೀದಿದಾರರು ಐಡಿಬಿಐ ಬ್ಯಾಂಕಿನ ಮಾಲೀಕತ್ವ ಪಡೆದ ಬಳಿಕ ಷೇರು ಹಿಡುವಳಿಗಳನ್ನು ಕಡಿಮೆ ಮಾಡಲು ನಾವು ಅವಕಾಶ ನೀಡಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರ್ಬಿಐನ ಮಾರ್ಗಸೂಚಿಯ ಪ್ರಕಾರ ಖಾಸಗಿ ಬ್ಯಾಂಕ್ ಪ್ರಮೋಟರ್ಗಳು, ಪರವಾನಗಿ ಪಡೆದ ಬಳಿಕ ತಮ್ಮ ಷೇರು ಹಿಡುವಳಿಗಳನ್ನು ಮೂರು ವರ್ಷಗಳಲ್ಲಿ 40 ಪ್ರತಿಶತ, 10 ವರ್ಷದೊಳಗಾಗಿ 20 ಪ್ರತಿಶತ ಹಾಗೂ 15 ವರ್ಷಗಳಲ್ಲಿ 15 ಪ್ರತಿಶತ ತಗ್ಗಿಸಬೇಕು ಎಂದು ಹೇಳುತ್ತದೆ.