ಗದಗ: ಸರ್ಕಾರಿ ಶಾಲೆಯಲ್ಲಿ ಸಿಬ್ಬಂದಿಗಳೇ ಕಳ್ಳತನಕ್ಕೆ ಇಳಿದಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರ, ಅಕ್ಕಿ,ಬೇಳೆ, ಹಾಲಿನ ಪೌಡರ್ ಗಳನ್ನು ಶಾಲೆಯ ಸಿಬ್ಬಂದಿಗಳೇ ಮನೆಗೆ ಕೊಂಡೊಯ್ಯುತ್ತಿದ್ದು, ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಐವರು ಅಡುಗೆ ಸಹಾಯಕರು ಶಾಲೆಯಲ್ಲಿದ್ದ ಪೌಷ್ಠಿಕ ಆಹಾರವನ್ನು ಕದ್ದು ಮನೆಗೆ ಸಾಗಿಸುತ್ತಿದ್ದರು. 35 ಕೆಜಿ ಅಕ್ಕಿ, 2 ಕೆಜಿ ಬೇಳೆ, 10 ಕೆಜಿ ಗೋಧಿ, ಹಾಲಿನ ಪುಡಿ ಸಮೇತವಾಗಿ ತಳ್ಳುಗಾಡಿಯಲ್ಲಿ ಹಾಕಿಕೊಂಡು ಸಾಗಾಟ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರು ಶಾಲಾ ಸಿಬ್ಬಂದಿಗಳ ಕಳ್ಳಾಟ ಬಯಲು ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಬ್ಬಂದಿಯನ್ನು ಹಿಡಿದುಕೊಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.