ಅಗತ್ಯ ಔಷಧಿಗಳ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯನ್ನು ಪರಿಷ್ಕರಿಸಿದೆ. ಸಾಮಾನ್ಯವಾಗಿ ಬಳಕೆಯಾಗಲ್ಪಡುವ 39 ಔಷಧಗಳ ಬೆಲೆಯನ್ನು ದರವನ್ನು ಇಳಿಕೆ ಮಾಡಿದೆ.
ಕ್ಯಾನ್ಸರ್, ಮಧುಮೇಹ ವಿರೋಧಿ, ಆ್ಯಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಾ, ಆಂಟಿರೆಟ್ರೋವೈರಲ್, ಕ್ಷಯ ರೋಗ ಹಾಗೂ ಕೋವಿಡ್ ಚಿಕಿತ್ಸೆಯಲ್ಲಿ ಬಳಸಲ್ಪಡುವ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಎನ್ಎಲ್ಇಎಂ ಪಟ್ಟಿಯಲ್ಲಿ 16 ಔಷಧಿಗಳ ಹೆಸರನ್ನು ತೆಗೆದು ಹಾಕಲಾಗಿದೆ. ಐಸಿಎಂಆರ್ ಔಷಧಿಗಳ ಬೆಲೆ ನಿಯಂತ್ರಣವನ್ನು ವಿಸ್ತರಿಸಲು ಅನೇಕ ಸಮಯದಿಂದ ಯೋಜನೆ ರೂಪಿಸಿದೆ.
ಸಾಮಾನ್ಯವಾಗಿ ಬಳಕೆಯಾಗಲ್ಪಡುವ ಔಷಧಿಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಟೆನಿಲಿಗ್ಲಿಪ್ಟಿನ್, ಕ್ಷಯ ರೋಗ ನಿರೋಧ ಔಷಧಿ, ಕೋವಿಡ್ ಚಿಕಿತ್ಸೆಯಲ್ಲಿ ಬಳಸಲ್ಪಡುವ ಐವರ್ಮೆಕ್ಟಿನ್ ಔಷಧಿಗಳ ಬೆಲೆಯನ್ನು ಕಡಿತ ಮಾಡಲಾಗಿದೆ.
ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು 2015ರಲ್ಲಿ ಸೂಚನೆ ನೀಡಿತ್ತು. 2016ರಲ್ಲಿ ಜಾರಿಗೆ ತರಲಾಗಿತ್ತು. ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್ , ನೀತಿ ಆಯೋಗದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಈ ಪಟ್ಟಿಯನ್ನು ಪರಿಷ್ಕರಿಸಿದೆ.