ನವದೆಹಲಿ: ಸಾರ್ವತ್ರಿಕ ವಿದ್ಯುದೀಕರಣದ ಗುರಿಯೊಂದಿಗೆ ಸೌಭಾಗ್ಯ ಯೋಜನೆಯಡಿ ಸರ್ಕಾರವು 2.86 ಕೋಟಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಇಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ವಿದ್ಯುತ್ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು, ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ(ಸೌಭಾಗ್ಯ) ಅಡಿಯಲ್ಲಿ ದೇಶದ ಒಟ್ಟು 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಹೇಳಿದ್ದಾರೆ.
2017ರಲ್ಲಿ ದೇಶದ ಸಾರ್ವತ್ರಿಕ ಮನೆಗಳ ವಿದ್ಯುದ್ದೀಕರಣವನ್ನು ಸಾಧಿಸಲು ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಎಲ್ಲಾ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸೌಭಾಗ್ಯ ಯೋಜನೆಯಡಿ ಬಿಟ್ಟುಹೋಗಿರುವ ವಿದ್ಯುತ್ ಇಲ್ಲದ ಮನೆಗಳ ವಿದ್ಯುದ್ದೀಕರಣಕ್ಕಾಗಿ ಪರಿಷ್ಕೃತ ವಿತರಣಾ ವಲಯದ ಯೋಜನೆಯಡಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.