
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 14, 2022 ರಲ್ಲಿ ಈ ಕುರಿತ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ 1ರಿಂದ ಹೊಸ ವಾಹನಗಳಲ್ಲಿ ಇದು ಅಳವಡಿಕೆಯಾಗಬೇಕಿತ್ತು. ಈಗ ಈ ದಿನಾಂಕವನ್ನು ಮುಂದೂಡಲಾಗಿದ್ದು, ಸರಣಿ ಟ್ವೀಟ್ ಗಳ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ವಿಷಯ ತಿಳಿಸಿದ್ದಾರೆ.
ಹೊಸ ನಿಯಮ ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದು, ಇದರಿಂದಾಗಿ ಇನ್ನೂ ಒಂದು ವರ್ಷಗಳ ಕಾಲ ಅವಕಾಶ ಸಿಕ್ಕಂತಾಗಿದೆ. ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಮೃತಪಟ್ಟ ಬಳಿಕ ಏರ್ ಬ್ಯಾಗ್ ಗಳ ಕಡ್ಡಾಯ ಮಾಡಲು ಒತ್ತಡ ಹೆಚ್ಚಾಗಿತ್ತು. ಆದರೆ ವಾಹನ ಉತ್ಪಾದಕ ಕಂಪನಿಗಳು ಇದಕ್ಕೆ ಇನ್ನೂ ತಯಾರಾಗಿರದ ಕಾರಣ ಈಗ ಮತ್ತೆ ಒಂದು ವರ್ಷಗಳ ಕಾಲ ಮುಂದೂಡಲಾಗಿದೆ ಎಂದು ಹೇಳಲಾಗಿದೆ.