alex Certify BIG NEWS: ಕೋವಿಶೀಲ್ಡ್​ ಲಸಿಕೆ ಡೋಸೇಜ್​ಗಳ ನಡುವಿನ ಅಂತರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಶೀಲ್ಡ್​ ಲಸಿಕೆ ಡೋಸೇಜ್​ಗಳ ನಡುವಿನ ಅಂತರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಕೋವಿಶೀಲ್ಡ್​​ ಎರಡೂ ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ದೇಶದಲ್ಲಿ ಇಮ್ಯೂನೈಸೇಷನ್​ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಡೋಸೇಜ್​ಗಳ ನಡುವಿನ ಅಂತರ ಎಷ್ಟಿರಬೇಕು ಎಂದು ನಿರ್ಧರಿಸುತ್ತದೆ.
ಕೋವಿಶೀಲ್ಡ್​​ನ 2 ಡೋಸ್​ಗಳ ನಡುವಿನ ಅಂತರ ಕಡಿಮೆ ಮಾಡುವ ಬಗ್ಗೆ ಎನ್​ಟಿಎಜಿಐ ಜೊತೆ ಚರ್ಚೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲಸಿಕೆ ಲಭ್ಯತೆಯು ಹೆಚ್ಚಿದ ಬಳಿ 45 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಎರಡು ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ ಎಂಬ ವಿಚಾರ ಈ ತಿಂಗಳ ಆರಂಭದಲ್ಲಿಯೇ ವರದಿಯಾಗಿತ್ತು.

ಪ್ರಸ್ತುತ ವಯಸ್ಕರಿಗೆ 2 ಕೋವಿಶೀಲ್ಡ್​ ಡೋಸ್​ಗಳ ನಡುವಿನ ಅಂತರವು 12- 16 ವಾರವಾಗಿದೆ.

ಈ ಮೊದಲು ಅಂದರೆ ಕೊರೊನಾ ಲಸಿಕೆ ಅಭಿಯಾನ ಆರಂಭವಾದ ಸಂದರ್ಭದಲ್ಲಿ ಕೋವಿಶೀಲ್ಡ್​ ಲಸಿಕೆಗಳ ನಡುವಿನ ಅಂತರವನ್ನು 6 ವಾರಗಳಿಗೆ ನಿಗದಿ ಮಾಡಲಾಗಿತ್ತು. ಬಳಿಕ ಈ ಅಂತರವನ್ನು ಆರರಿಂದ ಎಂಟು ವಾರಕ್ಕೆ ಏರಿಕೆ ಮಾಡಲಾಗಿತ್ತು.

ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು 2 ಡೋಸ್​ ಕೋವಿಶೀಲ್ಡ್​ ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ನಿಗದಿ ಮಾಡಿತ್ತು. ಲಸಿಕೆ ಕೊರತೆ ಇರೋದ್ರಿಂದ ಸರ್ಕಾರ ಈ ರೀತಿ ಮಾಡಿದೆ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ ಇದೀಗ ಮತ್ತೆ ಕೋವಿಶೀಲ್ಡ್​ ಲಸಿಕೆ ಡೋಸೇಜ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸರ್ಕಾರ ಯೋಚನೆ ನಡೆಸುತ್ತಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...