ನವದೆಹಲಿ: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 1 ಕೋಟಿ ಝೈಕೋವ್ ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಹಮದಾಬಾದ್ ಮೂಲದ ಕಂಪನಿಯಿಂದ 1 ಕೋಟಿ ಡೋಸ್ ಲಸಿಕೆ ಖರೀದಿಸಲು ಆದೇಶ ಹೊರಡಿಸಿದೆ.
ಸೂಜಿ ರಹಿತವಾದ ಒಂದು ಸಲ ಬಳಸಿ ಎಸೆಯುವ ಲಸಿಕೆಯ ದರ 358 ರೂಪಾಯಿ ಆಗಿದೆ. ಮೂರು ಡೋಸ್ ಗಳ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುವುದು. ಇದಕ್ಕಾಗಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಿದ್ದು, ಪ್ರತಿ ತಿಂಗಳು ಒಂದು ಕೋಟಿ ಡೋಸ್ ಲಸಿಕೆ ಪೂರೈಸಲು ಕಂಪನಿ ಮುಂದಾಗಿದೆ.
ಮಕ್ಕಳಿಗೆ ಶೀಘ್ರದಲ್ಲಿಯೇ ಲಸಿಕೆ ದೊರೆಯಲಿದೆ. ಸೂಜಿ ರಹಿತವಾದ ನೋವಾಗದ ಜೆಟ್ ಅಪ್ಲಿಕೇಟರ್ ಮೂಲಕ ಲಸಿಕೆ ನೀಡಲಾಗುವುದು ಎನ್ನಲಾಗಿದೆ.