alex Certify BIG NEWS: ಸಕ್ಕರೆ ಎಂಎಸ್‌ಪಿ, ಎಥೆನಾಲ್ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಕ್ಕರೆ ಎಂಎಸ್‌ಪಿ, ಎಥೆನಾಲ್ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ: 2024-25 ನೇ ಸಾಲಿನಲ್ಲಿ ಎಥೆನಾಲ್ ಬೆಲೆಯನ್ನು ಮತ್ತು ಸಕ್ಕರೆಯ ಕನಿಷ್ಠ ಮಾರಾಟದ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಆಹಾರ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಹೇಳಿದ್ದಾರೆ.

ಎಥೆನಾಲ್ ಬೆಲೆ ಏರಿಕೆಯ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಪೆಟ್ರೋಲಿಯಂ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮಾಹಿತಿ ನೀಡಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿದೆ. ಫೆಬ್ರವರಿ 2019 ರಲ್ಲಿ ಕೆಜಿಗೆ 31 ರೂ. ಇದ್ದ ದರ ಬದಲಾಗದೆ ಉಳಿದಿದೆ. ಉತ್ತಮ ಮುಂಗಾರು ಮಳೆಯಿಂದಾಗಿ 2024-25ರ ಋತುವಿನಲ್ಲಿ(ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಉತ್ಪಾದನೆಯು ಉತ್ತಮವಾಗಿರಲಿದೆ ಎಂದು ಅವರು ಹೇಳಿದರು.

2022-23 ಎಥೆನಾಲ್ ಪೂರೈಕೆ ವರ್ಷದಿಂದ(ನವೆಂಬರ್-ಅಕ್ಟೋಬರ್) ಸರ್ಕಾರವು ನಿಗದಿಪಡಿಸಿದ ಎಥೆನಾಲ್ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ಪ್ರಸ್ತುತ, ಕಬ್ಬಿನ ರಸದಿಂದ ಉತ್ಪತ್ತಿಯಾಗುವ ಎಥೆನಾಲ್ ಬೆಲೆ ಲೀಟರ್‌ಗೆ 65.61 ರೂ ಆಗಿದ್ದರೆ, ಬಿ-ಹೆವಿ ಮತ್ತು ಸಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್‌ನ ದರಗಳು ಕ್ರಮವಾಗಿ ಲೀಟರ್ ಗೆ 60.73 ರೂ. ಮತ್ತು 56.28 ರೂ. ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...