alex Certify 8 ಪ್ರಯಾಣಿಕರನ್ನು ಹೊತ್ತೊಯ್ಯುವ ಎಲ್ಲ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ಪ್ರಯಾಣಿಕರನ್ನು ಹೊತ್ತೊಯ್ಯುವ ಎಲ್ಲ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯ…?

ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ವಿತರಿಸಿದ ಕರಡು ನೋಟಿಫಿಕೇಶನ್ ಅನ್ವಯ ಎಂ1 ಕೆಟಗರಿಯ, ಅಂದರೆ ಎಂಟು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, ಎಲ್ಲಾ ವಾಹನಗಳಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗುವುದು.

ಈ ನಿಯಮಗಳನ್ನು ಅಕ್ಟೋಬರ್‌ 1, 2022ರಿಂದ ಕಡ್ಡಾಯಗೊಳಿಸಲಾಗುವುದು. ಈ ದಿನಾಂಕದ ಬಳಿಕ ಉತ್ಪಾದನೆಯಾಗುವ ವಾಹನಗಳಲ್ಲಿ ಸೀಟ್ ಬೆಲ್ಟ್‌, ಸೀಟ್ ಬೆಲ್ಟ್‌ ಅಲಾರ್ಮ್ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸಲು ಒದಗಿಸಬೇಕಾಗುತ್ತದೆ.

BIG NEWS: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಶಾಸಕ ರಘುಪತಿ ಭಟ್ ಗೆ ವಿದೇಶದಿಂದ ಜೀವ ಬೆದರಿಕೆ ಕರೆ

ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲು ಕೋರಿ ತಯಾರಿಸಲಾದ ಈ ಕರಡನ್ನು ಸಂಬಂಧಪಟ್ಟ ವರ್ಗಗಳ ಮಂದಿಯಿಂದ ಪ್ರತಿಕ್ರಿಯೆ ಕೋರಿ ಪ್ರಕಟಿಸಲಾಗಿದೆ. 30 ದಿನಗಳ ಒಳಗೆ ಈ ಕರಡಿಗೆ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಚಿವಾಲಯ ಕೋರಿದೆ.

ಎಲ್ಲಾ ಎಂಟು-ಸೀಟರ್‌ ವಾಹನಗಳಲ್ಲೂ ಮುಂದಿನ ಸೀಟುಗಳಿಗೆ ಮೂರು ಪಾಯಿಂಟ್‌ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲು ಕೋರಿ ಈ ಕರಡು ರಚಿಸಲಾಗಿದೆ. 3.5 ಟನ್‌ಗಳಿಗಿಂತ ಕಡಿಮೆ ತೂಕದ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳನ್ನು ಈ ಎಂ1 ಕೆಟಗರಿಯಲ್ಲಿ ಪರಿಗಣಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...