alex Certify ಉದ್ಯೋಗ ವಾರ್ತೆ : 1 ಲಕ್ಷ ಸಂಬಳದ ಸರ್ಕಾರಿ ಉದ್ಯೋಗಗಳು, ಈ ಕೂಡಲೇ ಅರ್ಜಿ ಸಲ್ಲಿಸಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ವಾರ್ತೆ : 1 ಲಕ್ಷ ಸಂಬಳದ ಸರ್ಕಾರಿ ಉದ್ಯೋಗಗಳು, ಈ ಕೂಡಲೇ ಅರ್ಜಿ ಸಲ್ಲಿಸಿ..!

ಸರ್ಕಾರಿ ಉದ್ಯೋಗವನ್ನು ಎದುರು ನೋಡುತ್ತಿದ್ದೀರಾ? ಸರ್ಕಾರಿ ಉದ್ಯೋಗ ಪಡೆಯುವುದು ನಿಮ್ಮ ಗುರಿಯೇ? ಕೇಂದ್ರ ಸರ್ಕಾರಿ ಸಂಸ್ಥೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಈ ಉದ್ಯೋಗಗಳಿಗೆ ಆಯ್ಕೆಯಾದರೆ, ಒಬ್ಬರು ತಿಂಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚಿನ ವೇತನವನ್ನು ಪಡೆಯಬಹುದು. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿರುವ ಗೇಲ್ ವರ್ಕ್ ಸೆಂಟರ್ಗಳು / ಘಟಕಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಾಹಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 391 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 7 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. 10ನೇ ತರಗತಿ, ಇಂಟರ್ ಮೀಡಿಯೇಟ್, ಐಟಿಐ, ಡಿಪ್ಲೊಮಾ, ಸಿಎ/ ಐಸಿಡಬ್ಲ್ಯೂಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಬಿಎಸ್, ಬಿಬಿಎಂ, ಬಿಇ, ಬಿಟೆಕ್, ಎಂಎಸ್ಸಿ, ಎಂಕಾಂ, ಪಿಎಚ್ ಡಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 26 ರಿಂದ 55 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಲಿಖಿತ ಪರೀಕ್ಷೆ, ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ, ಟ್ರೇಡ್/ಸ್ಕಿಲ್ ಟೆಸ್ಟ್ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ಮಾಹಿತಿ:

ಒಟ್ಟು ಕಾರ್ಯನಿರ್ವಾಹಕೇತರ ಹುದ್ದೆಗಳು: 391

ವರ್ಗವಾರು ಖಾಲಿ ಹುದ್ದೆಗಳು:

ಜ್ಯೂನಿಯರ್ ಇಂಜಿನಿಯರ್ (ಕೆಮಿಕಲ್): 2
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್): 1
ಫೋರ್ಮನ್ (ಎಲೆಕ್ಟ್ರಿಕಲ್): 1
ಫೋರ್ಮನ್ (ಇನ್ಸ್ಟ್ರುಮೆಂಟೇಶನ್): 14
ಫೋರ್ಮನ್ (ಸಿವಿಲ್): 6
ಜೂನಿಯರ್ ಸೂಪರಿಂಟೆಂಡೆಂಟ್ (ಅಧಿಕೃತ ಭಾಷೆ): 5
ಜೂನಿಯರ್ ಕೆಮಿಸ್ಟ್: 8
ಜೂನಿಯರ್ ಅಕೌಂಟೆಂಟ್: 14
ಟೆಕ್ನಿಕಲ್ ಅಸಿಸ್ಟೆಂಟ್ (ಲ್ಯಾಬೊರೇಟರಿ): 3
ಆಪರೇಟರ್ (ಕೆಮಿಕಲ್): 73
ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 44
ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೇಶನ್): 45
ಟೆಕ್ನಿಷಿಯನ್ (ಮೆಕ್ಯಾನಿಕಲ್): 39
ಟೆಕ್ನಿಷಿಯನ್ (ಟೆಲಿಕಾಂ ಮತ್ತು ಟೆಲಿಮೆಟ್ರಿ): 11
ಆಪರೇಟರ್ (ಅಗ್ನಿಶಾಮಕ): 39
ಆಪರೇಟರ್ (ಬಾಯ್ಲರ್): 08
ಅಕೌಂಟ್ಸ್ ಅಸಿಸ್ಟೆಂಟ್: 13
ಬಿಸಿನೆಸ್ ಅಸಿಸ್ಟೆಂಟ್: 65

ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಇಂಟರ್ ಮೀಡಿಯೇಟ್, ಐಟಿಐ, ಡಿಪ್ಲೊಮಾ, ಸಿಎ/ ಐಸಿಡಬ್ಲ್ಯೂಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಬಿಎಸ್, ಬಿಬಿಎಂ, ಬಿಇ, ಬಿಟೆಕ್, ಎಂಎಸ್ಸಿ, ಎಂಕಾಂ, ಪಿಎಚ್ ಡಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 26 ರಿಂದ 55 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ, ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ, ಟ್ರೇಡ್/ಸ್ಕಿಲ್ ಟೆಸ್ಟ್ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಂಬಳ

ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ 35,000-1,38,000 ರೂ. ಜೂನಿಯರ್ ಸೂಪರಿಂಟೆಂಡೆಂಟ್, ಜೂನಿಯರ್ ಕೆಮಿಸ್ಟ್ ಮತ್ತು ಜೂನಿಯರ್ ಅಕೌಂಟೆಂಟ್ ಹುದ್ದೆಗಳಿಗೆ 29,000-1,20,000 ರೂ. ಉಳಿದ ಹುದ್ದೆಗಳಿಗೆ 24,500-90,000 ರೂ.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು 50 ರೂ. ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ನೇರವಾಗಿ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:

08-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

07-09-2024

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...