10ನೇ/12ನೇ ತರಗತಿ ಪಾಸ್‌ಔಟ್ ಹಾಗೂ ಪದವೀಧರರಿಗೆ ಸಶಸ್ತ್ರ/ಪೊಲೀಸ್/ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 30,000+ ಹುದ್ದೆಗಳು ಖಾಲಿ ಇವೆ.
ಭಾರತೀಯ ಸೇನೆ, ಭಾರತೀಯ ನೌಕಾಪಡೆ, ವಾಯುಪಡೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಭಾರತೀಯ ಅಂಚೆಯಲ್ಲೂ ಸಹ 2,357 ಹುದ್ದೆಗಳು ಖಾಲಿ ಇದ್ದು ಅರ್ಜಿಯನ್ನು ಆಗಸ್ಟ್ 19ರೊಳಗೆ ಸಲ್ಲಿಸಬೇಕಿದೆ.
ಸೇನಾ ನೇಮಕಾತಿ ರ‍್ಯಾಲಿಗಳನ್ನು ಹಿಮಾಚಲ ಪ್ರದೇಶದ ಮಂಡಿ, ಕುಲು ಹಾಗೂ ಲಾಹೌಲ್-ಸ್ಪಿತಿಯಲ್ಲಿ ನವೆಂಬರ್ 6ರಿಂದ 16ರ ನಡುವೆ ಹಮ್ಮಿಕೊಳ್ಳಲಾಗುವುದು. ರಾಜ್ಯದ ಹಮೀರ್ಪುರ, ಬಿಲಾಸ್ಪುರ ಹಾಗೂ ಊನಾ ಜಿಲ್ಲೆಗಳಲ್ಲಿ ಫೆಬ್ರವರಿ 5-20ರ ನಡುವೆ ರ‍್ಯಾಲಿ ಇರಲಿದೆ.
ಮೊದಲ ಬಾರಿ NDA ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ ಮಹಿಳೆಯರು….!
ಇದೇ ವೇಳೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಜನರಲ್ ಡ್ಯೂಟಿ ಪೇದೆಗಳ ಹುದ್ದೆಗಳಿಗೆ ಖಾಲಿ ಇರುವ 25,271 ಹುದ್ದೆಗಳ ಭರ್ತಿಗೆ 10ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆಹ್ವಾನಿಸಿದೆ. ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ, ಎನ್‌ಐಎ ಹಾಗೂ ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್‌ಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ssc.nic.in ಜಾಲತಾಣ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಆಗಸ್ಟ್ 31, 2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಸಿ ಕೆಟಗರಿಯ 282 ನಾಗರಿಕ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು indianairforce.nic.inಗೆ ಭೇಟಿ ಕೊಟ್ಟು ಸೆಪ್ಟೆಂಬರ್ 7, 2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ರಕ್ಷಣಾ ಸಚಿವಾಲಯದಲ್ಲಿ ನಾಗರಿಕ ಮೋಟಾರ್ ಚಾಲಕ ಹಾಗೂ ಕೀಟ ನಿಯಂತ್ರಣ ವರ್ಕರ್ ಹುದ್ದೆಗಳು ಖಾಲಿ ಇದ್ದು, ಆಗಸ್ಟ್ 28ರೊಳಗೆ ಅಭ್ಯರ್ಥಿಗಳು ಸೂಕ್ತ ಫಾರ್ಮ್ಯಾಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪಂಜಾಬ್ ಪೊಲೀಸ್‌ನಲ್ಲಿ ಮುಖ್ಯಪೇದೆಯ ಹುದ್ದೆಗೆ 787 ಪೋಸ್ಟ್‌ಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು www.punjabpolice.gov.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.