ಬೆಂಗಳೂರು: ಸರ್ಕಾರಿ ಉದ್ಯೋಗದ ಭರವಸೀ ನೀಡಿ ಖಾಸಗಿ ಕಂಪನಿ ಉದ್ಯೋಗಿಗೆ 28 ಲಕ್ಷ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ 6 ಜನರ ವಿರುದ್ಧ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಚ್.ಕೆ.ರಾಘವೇಂದ್ರ ಎಂಬುವವರು ನೀಡಿದ ದೂರಿನ ಅನ್ವಯ ದಾವಣಗೆರೆ ಮೂಲದ ರಾಘವೇಂದ್ರ, ಮಂಜುನಾಥ್, ಸುನೀತಾ ಬಾಯಿ, ಗಾಯತ್ರಿ, ಸಚಿನ್ ಹಾಗೂ ತಿಲಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ರಾಘವೇಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತ ಕಿರಣ್ ಎಂಬಾತನ ಮೂಲಕ ದಾವಣಗೆರೆಯ ರಾಘವೇಂದ್ರ ಎಂಬಾತನ ಪರಿಚಯವಾಗಿತ್ತು. ಆತ ತನಗೆ ಸರ್ಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯವಿದೆ. ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಅಲ್ಲದೇ ತನ್ನ ಸಹೋದರ ಮಂಜುನಾಥ್ ದಾವಣಎರೆಯಲ್ಲಿ ಎಇಇ ಎಂದು ಹೇಳಿದ್ದ. ಆತನ ಮಾತು ನಂಬಿದ ರಾಘವೇಂದ್ರ 2021ರಲ್ಲಿ ಮುಂಗಡವಾಗಿ 2 ಲಕ್ಷ ಹಣ ನೀಡಿದ್ದರಂತೆ.
ಬಳಿಕ ಆರೋಪಿ ಹೇಳಿದಂತೆ ಆತನ ಪತ್ನಿ ಸವಿತಾಬಾಯಿ, ಸಹೋದರ ಮಂಜುನಾಥ್, ಆತನ ಪತ್ನಿ ಗಾಯತ್ರಿ, ಸಚಿನ್, ತಿಲಕ್ ಹೀಗೆ ಎಲ್ಲರಿಗೂ ಹಂತ ಹಂತವಾಗಿ ಒಟ್ಟು 28.40 ಲಕ್ಶ ಹಣ ವರ್ಗಾವಣೆ ಮಾಡಿದ್ದಾರಂತೆ. ಸರ್ಕಾರಿ ಕೆಲಸವೂ ಇಲ್ಲ. ಕೊಟ್ಟ ಹಣ ವಾಪಾಸ್ ಕೂಡ ಇಲ್ಲದಿದ್ದಾಗ ವಂಚಕರ ಮೋಸ ಬಾಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಬಂಡೇಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.