ಬೆಂಗಳೂರು: ರಾಜ್ಯ ಸರ್ಕಾರ 7 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಯಾವುದೇ ಹುದ್ದೆ ತೋರಿಸದೆ ವರ್ಗಾವಣೆಗೊಂಡಿದ್ದ ರೋಹಿಣಿ ಸಿಂಧೂರಿ ಅವರಿಗೆ ಆರು ತಿಂಗಳ ನಂತರ ಹುದ್ದೆ ನೀಡಲಾಗಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಅವರ ನಡುವಿನ ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಫೆಬ್ರವರಿ 21ರಂದು ಇಬ್ಬರು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಆದರೆ, ಅವರಿಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ.
ರೋಹಿಣಿ ಸಿಂಧೂರಿ ಅವರಿಗೆ ಈಗ ಕರ್ನಾಟಕ ಗೆಜೆಟಿಯರ್ ಇಲಾಖೆ ಮುಖ್ಯ ಸಂಪಾದಕರ ಹುದ್ದೆ ನೀಡಲಾಗಿದೆ.
ಪಿ. ಪ್ರದೀಪ್ –ನಿರ್ದೇಶಕರು, ಸೋಶಿಯಲ್ ಆಡಿಟ್, ಗ್ರಾಮೀಣಾಭಿವೃದ್ಧಿ ಇಲಾಖೆ
ವಿಕಾಸ್ ಕುಮಾರ್ ಸುರಳ್ಕರ್- ವಲಯ ಆಯುಕ್ತರು, ಆರ್.ಆರ್. ನಗರ, ಬಿಬಿಎಂಪಿ
ಕೆ.ಎಸ್. ಲತಾ ಕುಮಾರಿ –ಕಾರ್ಯದರ್ಶಿ, ಕೆಪಿಎಸ್ಸಿ
ಸಿ.ಎನ್. ಶ್ರೀಧರ -ಆಯುಕ್ತರು ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ ನಿಗಮ
ಸಂಗಪ್ಪ –ವ್ಯವಸ್ಥಾಪಕ ನಿರ್ದೇಶಕರು, ಕಿಯೋನಿಕ್ಸ್
ಶ್ರೀರೂಪ- ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಖನಿಜ ನಿಗಮ