ರೇಷನ್ ಕಾರ್ಡ್ಗಳನ್ನು ಆಧಾರ್ ಲಿಂಕಿಂಗ್ ಮಾಡಲು ಇದ್ದ ಗಡುವನ್ನು ಮಾರ್ಚ್ 31, 2023ರಿಂದ ಜೂನ್ 30, 2023ಕ್ಕೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಅಕ್ಕಿ, ಗೋಧಿ ಹಾಗೂ ಇತರೆ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಸಬ್ಸಿಡಿ ದರದಲ್ಲಿ ಪಡೆಯಲು ರೇಷನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಈ ಸಂಬಂಧ ಮಹತ್ವದ ನೋಟಿಸ್ ಒಂದನ್ನು ಗುರುವಾರ ಜಾರಿ ಮಾಡಿದೆ. ಆಧಾರ್ ಕಾರ್ಡ್ಅನ್ನು ರೇಷನ್ ಕಾರ್ಡ್ ಜೊತೆಗೆ ಲಿಂಕ್ ಮಾಡುವ ಮೂಲಕ ನಕಲಿ ಹಾಗೂ ಬೋಗಸ್ ಕಾರ್ಡ್ಗಳನ್ನು ಕಿತ್ತೊಗೆಯುವ ಉದ್ದೇಶ ಈ ನಡೆಯದ್ದಾಗಿದೆ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ಗೆ ಆಧಾರ್ ಲಿಂಕಿಂಗ್ ಮಾಡದೇ ಇದ್ದಲ್ಲಿ, ಈ ರೀತಿ ಮಾಡಿ.
ಆಫ್ಲೈನ್ ಮೂಲಕ ಆಧಾರ್-ರೇಷನ್ ಕಾರ್ಡ್ ಲಿಂಕಿಂಗ್:
1. ಹತ್ತಿರದ ರೇಷನ್ ಅಂಗಡಿ ಅಥವಾ ಪಿಡಿಎಸ್ ಕೇಂದ್ರಕ್ಕೆ ನಿಮ್ಮ ರೇಷನ್ ದಾಖಲೆಯನ್ನು ಕೊಂಡೊಯ್ಯಬೇಕು.
2. ಬೆರಳಚ್ಚು ಖಾತ್ರೀಕರಣದ ಮೂಲಕ ಪಿಡಿಎಸ್ ಏಜೆಂಟ್ ನಿಮ್ಮ ಆಧಾರ್ ಕಾರ್ಡ್ ಪರಿಶೀಲನೆ ಮಾಡುವರು.
3. ಈ ಪ್ರಕ್ರಿಯೆ ಪೊರ್ಣಗೊಂಡ ಕೂಡಲೇ ನಿಮಗೆ ಎಸ್ಎಂಎಸ್ ಮೂಲಕ ನೋಟಿಫಿಕೇಶನ್ ಬರುತ್ತದೆ.
4. ನಿಮ್ಮ ರೇಷನ್ ಕಾರ್ಡ್ಗೆ ಆಧಾರ್ ಲಿಂಕಿಂಗ್ ಆಗುತ್ತಲೇ ನಿಮಗೆ ಖಾತ್ರಿಯ ಎಸ್ಎಂಎಸ್ ಬರುತ್ತದೆ.
ಆನ್ಲೈನ್ ಮೂಲಕ ರೇಷನ್-ಆಧಾರ್ ಕಾರ್ಡ್ ಲಿಂಕಿಂಗ್:
1. ನಿಮ್ಮ ರಾಜ್ಯದ ಪಿಡಿಎಸ್ ಜಾಲತಾಣಕ್ಕೆ ಭೇಟಿ ನೀಡಿ. (ಪ್ರತಿ ರಾಜ್ಯವೂ ತನ್ನದೇ ಆದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್ ಹೊಂದಿರುತ್ತದೆ)
2. ಸಕ್ರಿಯ ರೇಷನ್ ಕಾರ್ಡ್ಗಳೊಂದಿಗೆ ಆಧಾರ್ ಲಿಂಕ್ ಮಾಡುವ ಆಯ್ಕೆಯನ್ನು ಒತ್ತಿ.
3. ಮೊದಲು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ಬಳಿಕ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಯನ್ನು ನಮೂದಿಸಿ.
4. continue/submit ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ಈ ಹಂತದಲ್ಲಿ ನಿಮ್ಮ ಮೊಬೈಲ್ಗೆ ಕಳುಹಿಸಲಾದ ಓಟಿಪಿಯನ್ನು ನಮೂದಿಸಿ.
6. ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಖಾತ್ರಿ ಪಡಿಸುವ ಎಸ್ಎಂಎಸ್ ನಿಮ್ಮ ಮೊಬೈಲ್ಗೆ ಬರಲಿದೆ.