ಬೆಂಗಳೂರು: ಸರ್ಕಾರಿ ನೌಕರರಿಗೆ ಕೊರೋನಾ ಬಂದರೆ ಚಿಕಿತ್ಸೆ ವೆಚ್ಚವನ್ನು ಮರು ಪಾವತಿ ಮಾಡಲಾಗುವುದು. ಈ ಕುರಿತಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ ವೆಚ್ಚ ಮರು ಪಾವತಿ ಮಾಡಲಾಗುತ್ತದೆ. ನೌಕರರು ಮತ್ತು ಅವರ ಅವಲಂಬಿತರ ಚಿಕಿತ್ಸಾ ವೆಚ್ಚವನ್ನು ಮರುಪಾವತಿ ಕ್ಲೇಮ್ ಗಳಿಗೆ ಸರ್ಕಾರದಿಂದ ಪ್ಯಾಕೇಜ್ ದರ ನಿಗದಿ ಮಾಡಲಾಗಿದೆ.
ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದುಕೊಂಡರೆ ದಿನಕ್ಕೆ 10 ಸಾವಿರ ರೂಪಾಯಿ, HDU ವಾರ್ಡ್ ನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ 12,000 ರೂ., ವೆಂಟಿಲೇಟರ್ ರಹಿತ ಐಸೋಲೇಷನ್ ಐಸಿಯುನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ 15,000 ರೂ., ವೆಂಟಿಲೇಟರ್ ಸಹಿತ ಐಸೋಲೇಶನ್ ಐಸಿಯುನಲ್ಲಿ ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.
ಪಿಪಿಕೆ ಕಿಟ್ ಒಳಗೊಂಡಂತೆ ಇತರೆ ಕನ್ಯೂಮೇಬಲ್ ಐಟಂ ಒಳಗೊಂಡಂತೆ ಮರು ಪಾವತಿ ಕ್ಲೇಮ್ ಗಳಿಗೆ ಸರ್ಕಾರದಿಂದ ಪ್ಯಾಕೇಜ್ ದರ ನಿಗದಿ ಮಾಡಲಾಗಿದೆ. ಆಸ್ಪತ್ರೆಯಲ್ಲಿನ ಚಿಕಿತ್ಸಾ ದರ ಪ್ಯಾಕೇಜ್ ದರಕ್ಕಿಂತ ಕಡಿಮೆ ಇದ್ದರೆ ಕಡಿಮೆ ಮೊತ್ತ ಮರು ಪಾವತಿಸಲಾಗುವುದು. ಚಿಕಿತ್ಸೆಗೆ ವೈದ್ಯಕೀಯ ಮುಂಗಡ ಪಾವತಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.