
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ದುರ್ನಡತೆ ಆರೋಪದ ವಿಚಾರಣೆ ಮತ್ತು ಶಿಸ್ತು ಕ್ರಮ ಕೈಗೊಳ್ಳಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.
ಸರ್ಕಾರಿ ನೌಕರರ ದುರ್ನಡತೆ ಸಾಬೀತಾದಲ್ಲಿ ಶಿಸ್ತುಕ್ರಮ ಕೈಗೊಳ್ಳಲು 9 ತಿಂಗಳ ಕಾಲಮಿತಿಯನ್ನು ಸರ್ಕಾರ ನಿಗದಿ ಮಾಡಿದೆ. 4 ತಿಂಗಳೊಳಗೆ ವಿಚಾರಣೆ ನಡೆಸಿ ವರದಿ ಮಂಡಿಸಲು ಕಾಲಮಿತಿ ನೀಡಲಾಗಿದೆ.
ಹೀಗೆ ದುರ್ನಡತೆ ಆರೋಪ ಕೇಳಿ ಬಂದ ನೌಕರರ ವಿರುದ್ಧ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು 9 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.