ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಪರಿಷ್ಕೃತ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರತಿವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಗ್ರಾಹಕರ ಸೂಚಂಕ ದರವನ್ನು ಆಧರಿಸಿ ನೌಕರರಿಗೆ ಡಿಎ ಲೆಕ್ಕಹಾಕಿ ನೀಡಲಾಗುತ್ತದೆ.
ಜುಲೈ ಲೆಕ್ಕಾಚಾರದ ಪ್ರಕಾರ ತುಟ್ಟಿಭತ್ಯೆ ದರ ಶೇಕಡ 3ರಷ್ಟು ಇರಲಿದ್ದು, 2020 ರ ಜನವರಿಯಲ್ಲಿ ಶೇಕಡ 4 ರಷ್ಟು ಮತ್ತು 2020 ರ ಜುಲೈನಲ್ಲಿ ಶೇಕಡ 3 ರಷ್ಟು ಹಾಗೂ 2021ರ ಜನವರಿಯಲ್ಲಿ ಶೇಕಡ 4 ರಷ್ಟು ತುಟ್ಟಿಭತ್ಯೆ ಘೋಷಿಸಲಾಗಿದ್ದು, ಕೊರೋನಾ ಕಾರಣದಿಂದ ಹೆಚ್ಚಳ ತಡೆಹಿಡಿಯಲಾಗಿತ್ತು. 2020 ರ ಜನವರಿಗಿಂತ ಮೊದಲು ಇದ್ದ ಶೇಕಡ 17 ರಷ್ಟು ಡಿಎ ಪಾವತಿಸಲಾಗುತ್ತಿದೆ.
ಸೆಪ್ಟೆಂಬರ್ ನಲ್ಲಿ ಎಲ್ಲವೂ ಸೇರಿದಂತೆ ಶೇಕಡ 31 ರಷ್ಟು ತುಟ್ಟಿಭತ್ಯೆಯನ್ನು ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಸಲು ನಿರ್ಧರಿಸಲಾಗಿದ್ದು, ಆರ್ಥಿಕ ಸಚಿವಾಲಯದ ಅನುಮೋದನೆ ದೊರೆತಿದೆ ಎಂದು ಹೇಳಲಾಗಿದೆ.