ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ, ಪಿಂಚಣಿದಾರರ ಮೂಲವೇತನ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇಕಡ 4ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಶೇಕಡ 42ರಿಂದ 46ಕ್ಕೆ ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಪಿಂಚಣಿದಾರರ ಮೂಲವೇತನವನ್ನು ಶೇಕಡ 4ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 2023ರ ಜುಲೈ 1 ರಿಂದಲೇ ಪೂರ್ವನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ದೀಪಾವಳಿ ಹಬ್ಬದ ತುಟ್ಟಿಭತ್ಯೆ ಹೆಚ್ಚಳದ ಪ್ರಯೋಜನ ಸಿಗಲಿದೆ. ನವೆಂಬರ್ ತಿಂಗಳ ವೇತನದಲ್ಲಿ ತುಟ್ಟಿಭತ್ಯೆ ಹಿಂಬಾಕಿ ಸೇರಿದಂತೆ ಹೆಚ್ಚಳ ಪ್ರಯೋಜನ ಸಿಗಲಿದ್ದು, ಇದರಿಂದಾಗಿ ಕೇಂದ್ರದ 47 ಲಕ್ಷ ನೌಕರರು, 68 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.