ನವದೆಹಲಿ: ದಸರಾ ಹಬ್ಬದ ಹೊತ್ತಲ್ಲೇ ಕೇಂದ್ರ ಸರ್ಕಾರಕ್ಕೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡ 4 ರಷ್ಟು ಹೆಚ್ಚಳ ಮಾಡಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
2022ರ ಜುಲೈ 1 ರಿಂದ ಹೊಸ ಡಿಎ ಪೂರ್ವಾನ್ವಯವಾಗಲಿದೆ. 50 ಲಕ್ಷ ಕೇಂದ್ರ ಸರ್ಕಾರಿ ನೌಕರರು, 61 ಲಕ್ಷ ಪಿಂಚಣಿದಾರರಿಗೆ ಇದರಿಂದ ಪ್ರಯೋಜನವಾಗಲಿದೆ. ಮೂಲವೇತನ ಅಥವಾ ಪಿಂಚಣಿಗೆ ನೀಡಲಾಗುವ ಶೇಕಡ 34 ರಷ್ಟು ಡಿಎ ಹಾಗೂ ಡಿಆರ್ ಗೆ ಶೇಕಡ 4ರಷ್ಟು ಏರಿಕೆ ಮಾಡುವ ಮೂಲಕ ಶೇಕಡ 38ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಸರ್ಕಾರದ ಮೇಲೆ ಪ್ರತಿವರ್ಷ 12,852.5 ಕೋಟಿ ರೂ. ಹೆಚ್ಚುವರಿ ವರಿಯಾಗಲಿದೆ.