ಬೆಂಗಳೂರು: ತಮ್ಮ ಅಧಿಕಾರದ ಕೊನೆಯ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.
2020 ರ ಜನವರಿ 1 ರಿಂದ 2021 ರ ಜೂನ್ 30ರ ಅವಧಿಯ ಹೆಚ್ಚುವರಿ ತುಟ್ಟಿಭತ್ಯೆ ಕಂತು ಬಿಡುಗಡೆ ಮಾಡಲು ಸೂಚಿಸಿದ್ದಾರೆ. 2021 ರ ಜುಲೈ ಒಂದರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಗಳಲ್ಲಿ ನೀಡಲಾಗುವ ತುಟ್ಟಿಭತ್ಯೆ ದರಗಳನ್ನು ಶೇಕಡ 11.25 ರಿಂದ 21.50 ಕ್ಕೆ ಪರಿಷ್ಕರಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರು, ನಿವೃತ್ತಿ ವೇತನದಾರರಿಗೆ, ಕುಟುಂಬ ನಿವೃತ್ತಿ ವೇತನದಾರರಿಗೆ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿದೆ.