ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ ಈ ಘಟನೆ ಜರುಗಿದೆ. ಚಳಿಗಾಲದ ಚಳಿಗೆ ಬಿಸಿಲು ಕಾಯುತ್ತಿದ್ದ ಸರ್ಕಾರಿ ಅಧಿಕಾರಿಗಳ ಬಳಿ ಬಂದ ಈ ಮೇಕೆ ಅವರಲ್ಲಿ ಒಬ್ಬರಿಂದ ಕಾಗದಗಳ ಫೈಲ್ ಒಂದನ್ನು ಕಸಿದುಕೊಂಡು ಓಡಿ ಹೋಗಿದೆ. ಮೊದಲಿಗೆ ಸಿಬ್ಬಂದಿ ಮೇಕೆಯ ಮೇಲೆ ನಿಗಾ ಇಟ್ಟಿರಲಿಲ್ಲ. ಆದರೆ ಕೆಲ ಕ್ಷಣಗಳ ಬಳಿಕ ಅದು ಏನು ಮಾಡುತ್ತಿದೆ ಎಂದು ಅರಿಯುತ್ತಲೇ ಅದನ್ನು ಅಟ್ಟಿಸಿಕೊಂಡು ಹೋಗಿದ್ದಾರೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ 22 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, “ಲೋ ಕೊಟ್ಟುಬಿಡೋ!” ಎಂದು ಮೇಕೆಗೆ ಈ ನೌಕರ ಕೇಳಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಕೊನೆಗೂ ಮೆಕೆಯ ಬಾಯಿಂದ ಪತ್ರಗಳನ್ನು ಪಡೆಯುವಷ್ಟರಲ್ಲಿ ಅಲ್ಲಿದ್ದ ಅರ್ಧದಷ್ಟು ಪತ್ರಗಳನ್ನು ಅದು ತಿಂದು ಹಾಕಿತ್ತು.
https://youtu.be/2ujCYkW5lhI