ಬೆಂಗಳೂರು: ಸರ್ಕಾರಿ ನೌಕರರ ವೈದ್ಯಕೀಯ ತಪಾಸಣೆ ಮೊತ್ತ ಮರು ಪಾವತಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲು ಮುಂದಾಗಿದೆ.
40 ವರ್ಷ ದಾಟಿದ ಸರ್ಕಾರಿ ನೌಕರರು ವರ್ಷಕ್ಕೆ ಒಂದು ಸಲ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಅದರ ಮೊತ್ತ ಮರುಪಾವತಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಸರ್ಕಾರಿ ನೌಕರರ ನಿಯಮ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ವರ್ಷಕ್ಕೆ ಒಂದು ಸಲ ನಿಗದಿಪಡಿಸಿದ ವೈದ್ಯಕೀಯ ತಪಾಸಣೆಗೆ ಒಳಗಾಗಿ ಹಣ ಮರುಪಾವತಿಸಿಕೊಳ್ಳುವ ಅವಕಾಶವಿದೆ. ರಕ್ತದಲ್ಲಿರುವ ಸಕ್ಕರೆ ಅಂಶ, ಯಕೃತ್, ಕಿಡ್ನಿ, ಇಸಿಜಿ, ಥೈರಾಯ್ಡ್, ಹಿಮೋಗ್ಲೋಬಿನ್ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.