ನವದೆಹಲಿ: 7 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಏರಿಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಶೇಕಡ 28 ಹಣದುಬ್ಬರ ದರಕ್ಕೆ ಅನುಗುಣವಾಗಿ ಡಿಎ ಏರಿಕೆ ಮಾಡುವ ಸಾಧ್ಯತೆ ಇದೆ. 50 ಲಕ್ಷ ಉದ್ಯೋಗಿಗಳು, 61 ಲಕ್ಷ ಪಿಂಚಣಿದಾರರಿಗೆ ಇದರಿಂದ ಅನುಕೂಲವಾಗುತ್ತದೆ. ಪ್ರಶಸ್ತ ಶೇಕಡ 17 ರಷ್ಟು ಡಿಎ ಇದ್ದು, ಶೇಕಡ 4 ರಷ್ಟು ಏರಿಕೆಯಾದರೆ ಶೇಕಡ 21 ಕ್ಕೆ ಹೆಚ್ಚಾಗಲಿದೆ. ಜನವರಿಯಿಂದಲೇ ಅನ್ವಯವಾಗುವಂತೆ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದ 2021 ರ ಜುಲೈವರೆಗೆ ಡಿಎ ಮತ್ತು ಡಿಆರ್ ತಡೆಹಿಡಿಯಲು ಕೇಂದ್ರ ಹಣಕಾಸು ಮಂತ್ರಾಲಯ ತೀರ್ಮಾನಿಸಿತ್ತು. ಆದರೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕ ಸಂಘಗಳ ಮಹಾಒಕ್ಕೂಟ ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ಏರಿಕೆ ಮಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಶೇಕಡ 4 ರಷ್ಟು ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ.