ನವದೆಹಲಿ: ಶೀಘ್ರವೇ ಲಸಿಕೆ ಕೈಸೇರಲಿದ್ದು ಎಲ್ಲರಿಗೂ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಗತ್ಯ ಇರುವವರಿಗೆ ಮಾತ್ರ ಲಸಿಕೆ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಗತ್ಯ ಮತ್ತು ನಿರ್ಣಾಯಕವಾದವರಿಗೆ ಮಾತ್ರ ಕೊರೋನಾ ಲಸಿಕೆಯನ್ನು ನೀಡಲಾಗುವುದು. ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿಲ್ಲ. ಕೊರೋನಾ ಹರಡುವ ಸರಪಳಿಯನ್ನು ಕತ್ತರಿಸುವುದು ನಮ್ಮ ಉದ್ದೇಶ. ಈ ಕಾರ್ಯದಲ್ಲಿ ಯಶಸ್ವಿಯಾದರೆ ಎಲ್ಲರಿಗೂ ಲಸಿಕೆ ನೀಡುವ ಅಗತ್ಯವಿರುವುದಿಲ್ಲ ಎಂದು ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಲಸಿಕೆ ಲಭ್ಯವಾಗುತ್ತಲೇ ಎಲ್ಲರಿಗೂ ನೀಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದರು. ಆದರೆ, ಆರೋಗ್ಯ ಸಚಿವಾಲಯ, ಆರೋಗ್ಯವಾಗಿರುವವರಿಗೆ ಮತ್ತು ಚೇತರಿಸಿಕೊಂಡವರಿಗೆ ಲಸಿಕೆ ಅಗತ್ಯವಿಲ್ಲವೆಂದು ತಿಳಿಸಿದೆ.