ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಖಾಸಗಿ ಪ್ರಯಾಣಿಕ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಗಳನ್ನು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದು, ಖಾಸಗಿ ವಾಹನಗಳಿಗೆ ಮಾಸಿಕ, ವಾರ್ಷಿಕ ಟೋಟಲ್ ಪಾಸ್ ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಶೇಕಡ 74 ರಷ್ಟು ಟೋಲ್ ಸಂಗ್ರಹದ ಆದಾಯ ವಾಣಿಜ್ಯ ವಾಹನಗಳಿಂದ ಬರುತ್ತಿದ್ದು, ಉಳಿದ ಶೇಕಡ 26ರಷ್ಟು ಆದಾಯ ಖಾಸಗಿ ವಾಹನಗಳಿಂದ ಬರುತ್ತಿದೆ. ಹೀಗಾಗಿ ಖಾಸಗಿ ವಾಹನಗಳಿಗೆ ಮಾತ್ರ ಪಾಸ್ ವಿತರಣೆ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
ಟೋಲ್ ಶುಲ್ಕ ಸಂಗ್ರಹ ಕೇಂದ್ರಗಳನ್ನು ಗ್ರಾಮಗಳ ಸಮೀಪ ನಿರ್ಮಿಸುವುದಿಲ್ಲ, ಹಳ್ಳಿಗಳ ಹೊರ ಭಾಗದಲ್ಲಿ ನಿರ್ಮಿಸುವುದರಿಂದ ಗ್ರಾಮೀಣರ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.