alex Certify ಸರ್ಕಾರ ಬದಲಾದ ಕೂಡಲೇ ತನಿಖೆ ಆದೇಶ ವಾಪಸ್ ಪಡೆಯಬಾರದು: ಹೈಕೋರ್ಟ್ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರ ಬದಲಾದ ಕೂಡಲೇ ತನಿಖೆ ಆದೇಶ ವಾಪಸ್ ಪಡೆಯಬಾರದು: ಹೈಕೋರ್ಟ್ ಮಹತ್ವದ ಅಭಿಪ್ರಾಯ

ಬೆಂಗಳೂರು: ಸರ್ಕಾರ ಬದಲಾದ ಕೂಡಲೇ ತನಿಖೆಗೆ ನೀಡಿದ ಆದೇಶ ವಾಪಸ್ ಪಡೆಯುವ ಕೆಲಸ ಮಾಡಬಾರದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನರೇಗಾ ಯೋಜನೆ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ಅಕ್ರಮವಾಗಿ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಗದಗ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರಿ ಸೇವಕರು ಸಾರ್ವಜನಿಕರ ನೂರಾರು ಕೋಟಿ ಹಣ ಕೋಟಿ ದುರ್ಬಳಕೆ ಮಾಡಿದಂತಹ ಆರೋಪದ ಬಗ್ಗೆ ಹಿಂದಿನ ಸರ್ಕಾರ ತನಿಖೆಗೆ ಆದೇಶಿಸಿದ್ದರೆ ನಂತರ ಬಂದ ಸರ್ಕಾರ ಹಿಂದಿನ ಆದೇಶವನ್ನು ಹಿಂಪಡೆಯಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2007 ರಿಂದ 2014ರ ವರೆಗೆ ನಡೆದ ನರೇಗಾ ಯೋಜನೆ ಈ ಜಾರಿಯಲ್ಲಿ ನೂರಾರು ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಂತರ ಕಾಮಗಾರಿ ನಕಲಿ ಬಿಲ್ ಸಿದ್ಧಪಡಿಸಿ ಹಣ ಮಂಜೂರು ಮಾಡಿದ್ದು, ಇದು ಸಾರ್ವಜನಿಕರು, ಸರ್ಕಾರದ ಹಣವಾಗಿದೆ. ಸಾರ್ವಜನಿಕರ ಹಣ ದುರ್ಬಳಕೆ ಮಾಡಿದ ಸರ್ಕಾರಿ ಸೇವಕರ ವಿರುದ್ಧ ತನಿಖೆ ನಡೆಸಲು ಒಂದು ಸರ್ಕಾರ ಹೇಳಿದರೆ ಮತ್ತೊಂದು ಸರ್ಕಾರ ಆದೇಶವನ್ನು ವಾಪಸ್ ಪಡೆಯುತ್ತದೆ. ಸರ್ಕಾರ ಬದಲಾದ ಕೂಡಲೇ ತನಿಖೆಗೆ ವಹಿಸಿದ ಆದೇಶ ಹಿಂಪಡೆಯಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...