ಬೆಂಗಳೂರು: ಸರ್ಕಾರಿ ನೌಕರರು ನಿತ್ಯವೂ ತಮ್ಮ ಹಣ ಘೋಷಣೆ ಮಾಡುವುದು ಕಡ್ಡಾಯವಾಗಿದೆ. ಘೋಷಣೆಗಿಂತ ಹಣ ಹೆಚ್ಚಾಗಿದ್ದರೆ ಅಕ್ರಮ ಸಂಪಾದನೆ ಎಂದು ಪರಿಗಣಿಸಲಾಗುತ್ತದೆ.
ನಿತ್ಯವೂ ನಗದು ಘೋಷಣೆ ಲೆಡ್ಜರ್ ನಿರ್ವಹಣೆಗೆ ಸುತ್ತೋಲೆ ಹೊರಡಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೌಕರರ ನಗದು ಘೋಷಣೆ ಲೆಡ್ಜರ್ ನಿರ್ವಹಣೆ ಮಾಡುವುದನ್ನು ಕಡ್ಡಾಯಗೊಳಿಸಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ನೌಕರರು ಆಫೀಸ್ ಗೆ ಬಂದಕೂಡಲೇ ತಮ್ಮೊಂದಿಗೆ ತಂದಿರುವ ವೈಯಕ್ತಿಕ ಹಣವನ್ನು ನಗದು ಘೋಷಣೆ ಲೆಡ್ಜರ್ ನಲ್ಲಿ ಘೋಷಿಸಿ ಸಹಿ ಮಾಡಬೇಕು. ಕೆಲಸದ ಸಂದರ್ಭದಲ್ಲಿ ನೌಕರರ ಬಳಿ ಘೋಷಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ದೊರೆತರೆ ಅದನ್ನು ಅಕ್ರಮ ಸಂಪಾದನೆ ಎಂದು ಪರಿಗಣಿಸಲಾಗುತ್ತದೆ.