ನವದೆಹಲಿ: ಗುಣಮಟ್ಟವಿಲ್ಲದ ಔಷಧಗಳ ತಯಾರಿಕೆಯ ವಿರುದ್ಧದ ಪ್ರಮುಖ ಶಿಸ್ತುಕ್ರಮ ಕೈಗೊಂಡ ಸರ್ಕಾರ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ನಿಯಂತ್ರಕರು 76 ಫಾರ್ಮಾ ಕಂಪನಿಗಳಲ್ಲಿ ಜಂಟಿ ತಪಾಸಣೆ ನಡೆಸಿದ್ದಾರೆ. ನಕಲಿ ಮತ್ತು ಕಲಬೆರಕೆ ಔಷಧಗಳನ್ನು ಉತ್ಪಾದಿಸುವ 18 ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಕಳೆದ 15 ದಿನಗಳಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿದೆ. ಗುಣಮಟ್ಟವಿಲ್ಲದ ಔಷಧಗಳ ತಯಾರಿಕೆ ವಿರುದ್ಧ ವಿಶೇಷ ಅಭಿಯಾನದ ಮೊದಲ ಹಂತದಲ್ಲಿ 76 ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಮತ್ತು ಕಲಬೆರಕೆ ಔಷಧಗಳನ್ನು ತಯಾರಿಸಿದ್ದಕ್ಕಾಗಿ ಮತ್ತು ಜಿಎಂಪಿ(ಉತ್ತಮ ತಯಾರಿಕಾ ಪದ್ಧತಿ) ಉಲ್ಲಂಘಿಸಿದ್ದಕ್ಕಾಗಿ 18 ಫಾರ್ಮಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, 26 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.