ಬೆಂಗಳೂರು: ಕೊರೋನಾದಿಂದ ಮೃತಪಟ್ಟ ಬಡವರಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು. ಬಿಪಿಎಲ್ ಕುಟುಂಬದವರಿಗೆ 1 ಲಕ್ಷ ರೂ ಪರಿಹಾರ ನೀಡುವ ಕುರಿತಂತೆ ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕೊರೋನಾ ಸೋಂಕಿನಿಂದ ದುಡಿಯುವ ಸದಸ್ಯ ಮೃತಪಟ್ಟರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕುಟುಂಬದ ಹಲವು ಸದಸ್ಯರು ಮೃತಪಟ್ಟಿದ್ದರೂ, ಒಬ್ಬರಿಗೆ ಪರಿಹಾರ ಕೊಡಲಾಗುವುದು. ಕೊರೊನಾದಿಂದ ಮೃತಪಟ್ಟ ಬಗ್ಗೆ ವೈದ್ಯರ ದೃಢೀಕರಣ ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ.