ಸಂಪುಟ ಸಭೆಯ ಮಾರ್ಫ್ ಆಗಿರುವ ವಿಡಿಯೋಗಳನ್ನು ಫೇಸ್ಬುಕ್, ಟ್ವಿಟರ್ ಮತ್ತು ಟೆಲಿಗ್ರಾಂನಲ್ಲಿ ಹಂಚುತ್ತಿದ್ದ ಅನೇಕ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸರ್ಕಾರ ತಿಳಿಸಿದೆ.
ಸಂಪುಟ ಸಭೆಯ ಘಟನಾವಳಿಗಳನ್ನು ನಕಲಿ ಆಡಿಯೋದೊಂದಿಗೆ ಸಂಕಲನ ಮಾಡಿ ಶೇರ್ ಮಾಡಲಾದ ವಿಡಿಯೋವೊಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಣ್ಣಿಗೆ ಬಿದ್ದಿದ್ದು, ಈ ಸಂಬಂಧ ಕ್ರಮ ಜರುಗಿಸಿದೆ.
ಒಮಿಕ್ರೋನ್ ನಿಂದಲೇ ದೇಶದಲ್ಲಿ ಕೊರೊನಾ 3ನೇ ಅಲೆ…! ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ
ಟ್ವಿಟರ್‌ನಲ್ಲಿ 73 ಹ್ಯಾಂಡಲ್‌ಗಳು, ಯೂಟ್ಯೂಬ್‌ನಲ್ಲಿ ನಾಲ್ಕು ವಿಡಿಯೋಗಳು, ಇನ್‌ಸ್ಟಾಗ್ರಾಂನಲ್ಲಿ ಒಂದು ಪ್ರೊಫೈಲ್ ಮೂಲಕ ತಪ್ಪು ಮಾಹಿತಿ ರವಾನೆ ಮಾಡಿದ್ದಲ್ಲದೇ, ದ್ವೇಷ ಬಿತ್ತುವ ಸರಕುಗಳನ್ನು ಬಿತ್ತರಿಸುತ್ತಿದ್ದ ಆಪಾದನೆ ಮೇಲೆ ಅವುಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ಕಿತ್ತೊಗೆಯಲಾಗಿದೆ ಎಂದು ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಖಾತೆಗಳ ಬಳಕೆದಾರರನ್ನು ಪತ್ತೆ ಮಾಡಿ ಕಾನೂನಿನ ಅಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ರಾಜೀವ್ ಚಂದ್ರಶೇಖರ್, ಈ ಖಾತೆಗಳನ್ನು ತೀವ್ರ ತಪಾಸಣೆಗೆ ಒಳಪಡಿಸುವುದಾಗಿ ಹೇಳಿದ್ದಾರೆ.