alex Certify BIG NEWS: ನೋಂದಾಯಿತ ಕಂಪನಿ ವಿಳಾಸದ ಭೌತಿಕ ಪರಿಶೀಲನೆ ನಿಯಮಗಳಿಗೆ ತಿದ್ದುಪಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೋಂದಾಯಿತ ಕಂಪನಿ ವಿಳಾಸದ ಭೌತಿಕ ಪರಿಶೀಲನೆ ನಿಯಮಗಳಿಗೆ ತಿದ್ದುಪಡಿ

ರಿಜಿಸ್ಟರ್ಡ್​ ಕಂಪನಿಗಳ ವಿಳಾಸದ ಭೌತಿಕ ಪರಿಶೀಲನೆ ಪ್ರಕ್ರಿಯೆ ಹೆಚ್ಚು ಪಾರದರ್ಶಕಗೊಳಿಸಲು ಕೇಂದ್ರ ಸರಕಾರವು ಕಂಪನಿ ನೋಂದಣಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯವು ಕಂಪನಿಗಳ ಕಾಯ್ದೆ, 2014 ರಲ್ಲಿ ಕಂಪನಿಯ ವಿಳಾಸ ಪರಿಶೀಲನೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಹೊಸ ನಿಯಮಗಳು ಗೆಜೆಟ್​ ಅಧಿಸೂಚನೆಯೊಂದಿಗೆ ಜಾರಿಗೆ ಬಂದಿವೆ.

ಈಗ ಪರಿಶೀಲನೆಯ ಸಮಯದಲ್ಲಿ, ನೋಂದಾಯಿತ ಕಂಪನಿ ಕಚೇರಿಯ ಛಾಯಾಚಿತ್ರ ಮತ್ತು ಸಾಕ್ಷಿಗಳ ಉಪಸ್ಥಿತಿಯ ವಿಧಾನ ಅಳವಡಿಸಿಕೊಳ್ಳಲಾಗುತ್ತದೆ.
ಕಂಪನಿಗಳ ರಿಜಿಸ್ಟ್ರಾರ್​ ಭೌತಿಕ ಪರಿಶೀಲನೆಯ ಅಗತ್ಯವನ್ನು ನಿರ್ಧರಿಸುತ್ತಾರೆ. ಕಾಯಿದೆಯ ಸೆಕ್ಷನ್​ 12 ರ ಪ್ರಕಾರ, ಕಂಪನಿಯು ತನ್ನ ವ್ಯವಹಾರವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಭಾವಿಸಿದರೆ ಕಂಪನಿಯ ನೋಂದಾಯಿತ ವಿಳಾಸದ ಭೌತಿಕ ಪರಿಶೀಲನೆಯನ್ನು ಮಾಡಲು ಕಂಪನಿಗಳ ರಿಜಿಸ್ಟ್ರಾರ್​ ನಿರ್ಧರಿಸಬಹುದು. ಈಗ ತಿದ್ದುಪಡಿಯು ಭೌತಿಕ ಪರಿಶೀಲನೆಯ ಪ್ರಕ್ರಿಯೆಯನ್ನು ನಿಗದಿಪಡಿಸಿದೆ. ಭೌತಿಕ ಪರಿಶೀಲನೆಯ ಸಂದರ್ಭದಲ್ಲಿ ಈಗ ಸ್ಥಳೀಯ ಮಟ್ಟದ ಇಬ್ಬರು ಸಾಕ್ಷಿಗಳ ಅಗತ್ಯವಿದೆ. ನಿಯಮದ ಪ್ರಕಾರ ಪರಿಶೀಲನೆಯ ಸಂದರ್ಭದಲ್ಲಿ ಅಗತ್ಯ ಸಮಯದಲ್ಲಿ ಸ್ಥಳೀಯ ಪೊಲೀಸರನ್ನು ಬಳಸಿಕೊಳ್ಳಬಹುದಾಗಿದೆ.

ಕಂಪನಿಯ ನೋಂದಣಿ ಸಮಯದಲ್ಲಿ ನೀಡಿದ ವಿಳಾಸಕ್ಕೆ ಲಗತ್ತಿಸಲಾದ ಕಟ್ಟಡದ ದಾಖಲೆಗಳನ್ನು ಪರೀಕ್ಷಿಸಲು ಸಹ ಇದು ಅಗತ್ಯವಾಗಿರುತ್ತದೆ. ಅದರ ನಂತರ ಆ ನೋಂದಾಯಿತ ವಿಳಾಸದ ಫೋಟೋವನ್ನು ತೆಗೆದುಕೊಳ್ಳಲಾಗುತ್ತದೆ, ಪ್ರತಿ ಪ್ರಕ್ರಿಯೆಯ ಪೂರ್ಣಗೊಂಡ ನಂತರ ಅಂತಿಮ ವರದಿಯನ್ನು ರಚಿಸಲಾಗುತ್ತದೆ. ನೋಂದಾಯಿತ ವಿಳಾಸದಲ್ಲಿ ಪತ್ರವ್ಯವಹಾರ ನಡೆಯುತ್ತಿಲ್ಲ ಎಂದು ಕಂಡುಬಂದರೆ, ಸಂಬಂಧಿತ ರಿಜಿಸ್ಟ್ರಾರ್​ ಕಂಪನಿ ಮತ್ತು ಅದರ ನಿರ್ದೇಶಕರಿಗೆ ಅದರ ಬಗ್ಗೆ ತಿಳಿಸುವಂತೆ ನೋಟಿಸ್​ ಕಳುಹಿಸುತ್ತಾರೆ.

ಕಂಪನಿಯಿಂದ ಬರುವ ಉತ್ತರದ ಆಧಾರದ ಮೇಲೆ, ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯವು ಮಾಡಿದ ತಿದ್ದುಪಡಿಯ ಪ್ರಕಾರ, ಆ ಕಂಪನಿಯ ಹೆಸರನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...