ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವೆಚ್ಚದ ಮೇಲೆ ವರ್ಷಾರಂಭದಿಂದಲೂ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ. ಮುಖ್ಯವಾಗಿ 2021-22ನೇ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ವೆಚ್ಚದ ಮೇಲಿದ್ದ ಬಿಗಿಯನ್ನು ಹಣಕಾಸು ಸಚಿವಾಲಯವು ಕಡಿಮೆ ಮಾಡಿದೆ.
ಹಣಕಾಸು ಆದಾಯ, ಆರ್ಥಿಕ ಪುನಶ್ಚೇತನದ ಸಂಭಾವ್ಯತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನಪರ ಕಾರ್ಯಕ್ರಮಗಳಿಗೆ ಇಲಾಖೆಗಳು ಮಾಡುವ ವೆಚ್ಚವನ್ನು ಕಡಿತಗೊಳಿಸುವುದು ಬೇಡ ಎಂದು ಸರ್ಕಾರ ಹೇಳಿದೆ. ಒಟ್ಟಾರೆ ವೆಚ್ಚಗಳ ಶೇ.20 ರಷ್ಟು ಮೊತ್ತವನ್ನು ಕಡಿತಗೊಳಿಸುವಂತೆ ಈ ಹಿಂದೆ ಸರ್ಕಾರವು ಎಲ್ಲ ಇಲಾಖೆಗಳಿಗೆ ಖಡಕ್ ಆದೇಶ ಕೊಟ್ಟಿತ್ತು.
BIG NEWS: ಸೆನ್ಸೆಕ್ಸ್ ಮತ್ತೊಂದು ದಾಖಲೆ; 60,333 ಕ್ಕೆ ತಲುಪಿದ ಮಾರ್ಕೆಟ್ ಸ್ಕೇಲ್
ಇಡೀ ವರ್ಷಕ್ಕೆ ಹಂಚಿಕೆಯಾಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಕೂಡ ಇಲಾಖೆಗಳಿಗೆ ಕೊರೊನಾ ಹಾವಳಿಯಿಂದಾಗಿ ಸಾಧ್ಯವಾಗಿರಲಿಲ್ಲ. ಆದರೆ, ಹಣಕಾಸು ಸಚಿವಾಲಯದ ವಿನಾಯಿತಿ ಹಿನ್ನೆಲೆಯಲ್ಲಿ ಬಾಕಿ ಇರುವ ಬಿಲ್‌ಗಳನ್ನು, ದಾಖಲೆಗಳನ್ನು ಕ್ಲಿಯರ್ ಮಾಡಲು ಅನುಮತಿ ಸಿಕ್ಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಕೃಷಿ, ರಸಗೊಬ್ಬರ, ಆರೋಗ್ಯ, ಔಷಧಗಳು ಮತ್ತು ಆಹಾರಕ್ಕೆ ಸಂಬಂಧಿತ ಇಲಾಖೆಗಳಿಗೆ ವೆಚ್ಚ ಕಡಿತಕ್ಕೆ ಸರ್ಕಾರ ಈ ಮುಂಚೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಸದ್ಯ ಕೂಡ ಅವುಗಳಿಗೆ ವೆಚ್ಚ ಕಡಿತದಿಂದ ವಿನಾಯಿತಿ ಮುಂದುವರಿದಿದೆ. 2021ರ ಜುಲೈನಲ್ಲಿ 1.16 ಲಕ್ಷ ಕೋಟಿ ರೂ. ಮತ್ತು ಆಗಸ್ಟ್‌ನಲ್ಲಿ1.12 ಲಕ್ಷ ಕೋಟಿ ರೂ. ಜಿಎಸ್‌ಟಿ ತೆರಿಗೆ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಂಗ್ರಹವಾದ ಹಿನ್ನೆಲೆಯಲ್ಲಿ ಸರ್ಕಾರವು ವೆಚ್ಚ ಕಡಿತದ ನಿರ್ಬಂಧವನ್ನು ವಾಪಸ್ ಪಡೆದಿದೆ.