ಕೋವಿಡ್ ಸಾಂಕ್ರಾಮಿಕ ತಗ್ಗಿದ ಕಾರಣ ಒಂದೊಂದೇ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18ರಿಂದ ಪೂರ್ಣ ಸಾಮರ್ಥ್ಯದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗುತ್ತಿದೆ.
2020 ರ ಮೇ ನಿಂದ ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನಯಾನ ಸಾಮರ್ಥ್ಯವನ್ನು ಮಿತಿಗೊಳಿಸಿದೆ. ಪ್ರಸ್ತುತ ಶೇ.85ರ ಮಿತಿಯಲ್ಲಿ ಪ್ರಯಾಣಿಕರನ್ನು ಸಾಗಿಸಲು ಅವಕಾಶ ಇದೆ.
ʼಜೀರ್ಣಶಕ್ತಿʼ ಉತ್ತಮವಾಗಿರಲು ಸೇವಿಸಿ ಮೂಲಂಗಿ
ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಪೂರ್ಣ ಸಾಮರ್ಥ್ಯದ ಅನುಮತಿಗೆ ವಿಮಾನಯಾನ ಸಂಸ್ಥೆಗಳು ಎದುರು ನೋಡುತ್ತಿದ್ದವು. ಆಗಸ್ಟ್ 12ರಿಂದ ಸೆಪ್ಟೆಂಬರ್ 18 ರ ನಡುವೆ ಶೇ.72ರಷ್ಟು ಸಾಮರ್ಥ್ಯ ಮಿತಿ ಇತ್ತು. ಜುಲೈ 5 ಮತ್ತು ಆಗಸ್ಟ್ 12ರ ಅವಧಿಯಲ್ಲಿ ಶೇ.65ರ ಮಿತಿ ಇತ್ತು.
ನಿಗದಿತ ದೇಶೀಯ ವಾಯುಯಾನ ಕಾರ್ಯಾಚರಣೆಯು ಅಕ್ಟೋಬರ್ 18ರಿಂದ ಯಾವುದೇ ಸಾಮರ್ಥ್ಯ ನಿರ್ಬಂಧವಿಲ್ಲದೇ ನಡೆಸಬಹುದು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.