ಮುಂಬೈ: ರೋಡ್ ಶೋಗಾಗಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿದ್ದ ಗೋವಿಂದ ಅವರು ತಮ್ಮ ಪ್ರಚಾರವನ್ನು ಮೊಟಕುಗೊಳಿಸಿ ಅನಾರೋಗ್ಯದ ಕಾರಣ ಮುಂಬೈಗೆ ಮರಳಿದ್ದಾರೆ.
ಗೋವಿಂದ ಅವರು ಜಲಗಾಂವ್‌ನ ಮುಕ್ತೈನಗರ, ಬೋಡ್ವಾಡ್, ಪಚೋರಾ ಮತ್ತು ಚೋಪ್ಡಾದಲ್ಲಿ ಮಹಾಯುತಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರು. ಪಚೋರಾದಲ್ಲಿ ಕಾರ್ಯಕ್ರಮವನ್ನು ಮಧ್ಯದಲ್ಲಿ ಕಡಿತಗೊಳಿಸಿದ ನಂತರ ಅವರು ಮುಂಬೈಗೆ ಮರಳಿದ್ದಾರೆ.
ನಟ-ರಾಜಕಾರಣಿ ಆಗಿರುವ ಗೋವಿಂದ ಮಾಜಿ ಸಂಸದರಾಗಿದ್ದು, ಕಳೆದ ಮಾರ್ಚ್‌ನಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಗೊಂಡರು. ಅಕ್ಟೋಬರ್ 1 ರಂದು ಆಕಸ್ಮಿಕ ಗುಂಡೇಟಿನಿಂದ ಗೋವಿಂದ ಗಾಯಗೊಂಡಿದ್ದರು.