
ಬೆಂಗಳೂರು: ಪೊಲೀಸರು, ರಾಜಕಾರಣಿಗಳ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ಓಪನ್ ಮಾಡಿದ್ದಾಯ್ತು ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರಿನಲ್ಲಿ ಕಿಡುಗೇಡಿಗಳು ನಕಲಿ ಫೇಸ್ ಬುಕ್ ಖಾತೆ ಓಪನ್ ಮಾಡಿದ್ದಾರೆ.
ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರು, ಫೋಟೋ ಬಳಸಿ ನಕಲಿ ಫೇಸ್ ಬುಕ್ ಖಾತೆ ಓಪನ್ ಮಾಡಲಾಗಿದ್ದು, ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯಪಾಲರ ಕಾರ್ಯದರ್ಶಿ ದೂರು ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.