ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಹೆಸರಿನಲ್ಲಿ ವಂಚಕರು ಹಣ ಮತ್ತು ವೈಯಕ್ತಿಕ ವಿವರಗಳನ್ನು ಕದಿಯಲು ಬಳಸುತ್ತಿರುವ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ SBI ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಈ ಎಚ್ಚರಿಕೆ ಸಂದೇಶ ಪ್ರಕಟಿಸಿದೆ.
ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ. ನಿಮ್ಮ ಖಾತೆಯನ್ನು ಆಧಾರ್ ಜತೆಗೆ ಜೋಡಿಸಿಲ್ಲ ಎಂಬಿತ್ಯಾದಿ ಸಂದೇಶಗಳಿರುವ ಎಸ್‌ಎಂಎಸ್ ಗಳು ಬಂದಾಗ ಅದಕ್ಕೆ ಪ್ರತಿಕ್ರಿಯಿಸಬೇಡಿ. ಅವುಗಳನ್ನು ಖಾಸಗಿ ನಂಬರ್‌ಗಳಿಂದ ಕಳುಹಿಸಿದ್ದು, ಕರೆಮಾಡಬೇಕಾದ ಅಥವಾ ಸಂದೇಶಕ್ಕೆ ಪ್ರತಿಕ್ರಿಯಿಸಬೇಕಾದ ಮೊಬೈಲ್ ಸಂಖ್ಯೆ SBI ಗೆ ಸೇರಿದ್ದಾಗಿರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.
ನಿಮ್ಮ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್ ಫೋನ್ʼ
ಕೆಲವು ಎಸ್‌ಎಂಎಸ್ ಸಂದೇಶಗಳಲ್ಲಿ ಲಿಂಕ್‌ಗಳನ್ನು ಕೂಡ ಜೋಡಿಸಲಾಗಿರುತ್ತದೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳನ್ನು ಹ್ಯಾಕ್ ಮಾಡುವ ಲಿಂಕ್ ಆಗಿರಬಹುದು. ಅಥವಾ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುವ ಲಿಂಕ್ ಕೂಡ ಆಗಿರಬಹುದು. ಹೀಗಾಗಿ ಇಂತಹ ಸಂದೇಶಗಳೊಂದಿಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಪಿಐಬಿ ಈ ಕುರಿತು ಮಾಡಿರುವ ಟ್ವೀಟ್ ಇಲ್ಲಿದೆ.
ಇಂತಹ ಸಂದೇಶಗಳು ಫೇಕ್ ಆಗಿದ್ದು, ವೈಯಕ್ತಿಕ, ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವ ಇಮೇಲ್, ಎಸ್‌ಎಂಎಸ್‌ಗೆ ಪ್ರತಿಕ್ರಿಯೆ ನೀಡಬಾರದು. ಇಂತಹ ಯಾವುದೇ ಸಂದೇಶ ಬಂದರೆ, ಕೂಡಲೇ ಈ ಕುರಿತು report.phishing @sbi.co.in ಗೆ ಸಂದೇಶದ ವಿವರ, ಅದರಲ್ಲಿರುವ ಫೋನ್ ನಂಬರ್, ಸಂದೇಶ ಯಾವ ನಂಬರ್‌ನಿಂದ ಬಂತು ಎಂಬಿತ್ಯಾದಿಗಳನ್ನು ನಮೂದಿಸಿ ಇಮೇಲ್ ಮಾಡಬೇಕು. ನಲ್ಲಿ ವರದಿ ಮಾಡಬೇಕು ಮತ್ತು ಬ್ಯಾಂಕ್ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ.