alex Certify ಅನೌಪಚಾರಿಕ ಕ್ಷೇತ್ರದ ನೌಕರರಿಗೆ ಕೇಂದ್ರದಿಂದ ಭರ್ಜರಿ ಗುಡ್‌ ನ್ಯೂಸ್: ಸಾಮಾಜಿಕ ಭದ್ರತೆ ಯೋಜನೆ ತಲುಪಿಸಲು ಇ- ಶ್ರಮ್‌ ಪೋರ್ಟಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೌಪಚಾರಿಕ ಕ್ಷೇತ್ರದ ನೌಕರರಿಗೆ ಕೇಂದ್ರದಿಂದ ಭರ್ಜರಿ ಗುಡ್‌ ನ್ಯೂಸ್: ಸಾಮಾಜಿಕ ಭದ್ರತೆ ಯೋಜನೆ ತಲುಪಿಸಲು ಇ- ಶ್ರಮ್‌ ಪೋರ್ಟಲ್

ಅನೌಪಚಾರಿಕ ಕ್ಷೇತ್ರದಲ್ಲಿರುವ ಎಲ್ಲಾ ನೌಕರರನ್ನು ಒಂದೆಡೆ ಕನೆಕ್ಟ್ ಮಾಡಲು ಮುಂದಾಗಿರುವ ಕಾರ್ಮಿಕ ಸಚಿವಾಲಯವು ಇ-ಶ್ರಮ್‌ ಪೊರ್ಟಲ್‌ಗೆ ಚಾಲನೆ ನೀಡಿದೆ. 26ನೇ ಆಗಸ್ಟ್‌ನಿಂದ ಚಾಲ್ತಿಗೆ ಬರಲಿರುವ ಈ ಪೋರ್ಟಲ್ ಮೂಲಕ ಅನೌಪಚಾರಿಕ ಕ್ಷೇತ್ರದ ನೌಕರರಿಗೆ ಸಾಮಾಜಿಕ ಭದ್ರತೆಯ ಅನೇಕ ಯೋಜನೆಗಳನ್ನು ತಲುಪಿಸುವ ಉದ್ದೇಶ ಸರ್ಕಾರದ್ದು.

ಕೇಂದ್ರ ಕಾರ್ಮಿಕ ಸಚಿವಾಲಯವು ಇದಕ್ಕೆಂದೇ ಅನೌಪಚಾರಿಕ ಕ್ಷೇತ್ರದ 38 ಕೋಟಿ ನೌಕರರಿಗೆ 12-ಅಂಕಿಯ ಗುರುತಿನ ಸಂಖ್ಯೆ ನೀಡುವ ಮೂಲಕ ಅವರಿಗಾಗಿ ರಾಷ್ಟ್ರಮಟ್ಟದ ದತ್ತಾಂಶ ಸಿದ್ಧಪಡಿಸಲಿದೆ.

ಇ-ಶ್ರಮ್ ಪೋರ್ಟಲ್‌ನ ಲೋಗೋವನ್ನು ಆಗಸ್ಟ್ 24ರಂದು ಬಿಡುಗಡೆ ಮಾಡಲಾಗಿದೆ.

ಗುರುವಿನ ಮನೆಗೆ ಭೇಟಿ ನೀಡಿದ ‘ಚಿನ್ನ’ದ ಹುಡುಗ

“ವ್ಯಾಪಾರೀ ಒಕ್ಕೂಟಗಳೊಂದಿಗೆ ಈ ಸಂಬಂಧ ಸಂವಹನ ನಡೆಸಿದ್ದು, ಇ-ಶ್ರಮ್ ಪೊರ್ಟಲ್‌ಗೆ ಅವರೆಲ್ಲರ ಬೆಂಬಲ ಸಿಕ್ಕಿರುವುದು ಹಾಗೂ ಎಲ್ಲರಿಂದಲೂ ಈ ನಿಟ್ಟಿನಲ್ಲಿ ರಚನಾತ್ಮಕ ಸಲಹೆಗಳನ್ನು ಪೋರ್ಟಲ್‌ನ ಯಶಸ್ವೀ ಅನುಷ್ಠಾನಕ್ಕೆ ಸಿಕ್ಕಿರುವುದು ಸಂತಸ ತಂದಿದೆ. ರಾಷ್ಟ್ರ ನಿರ್ಮಾಣಕಾರರಾದ ನಮ್ಮ ಶ್ರಮಯೋಗಿಗಳ ರಾಷ್ಟ್ರಮಟ್ಟದ ದತ್ತಾಂಶ ಭಂಡಾರ ಸಿದ್ದಪಡಿಸಲು ಈ ಪೋರ್ಟಲ್‌ ತರಲಾಗಿದ್ದು, ಅವರಿಗಾಗಿ ಕಲ್ಯಾಣ ಯೋಜನೆಗಳನ್ನು ಮನೆಬಾಗಿಲಿಗೇ ತಲುಪಿಸಲು ಇದು ನೆರವಾಗಲಿದೆ” ಎಂದು ಕಾರ್ಮಿಕ ಸಚಿವ ಭೂಪೇಂದರ್‌ ಯಾದವ್‌ ಟ್ವೀಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...