ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹುಂಡಿ ಹಣ ಬಳಕೆ ಬಗ್ಗೆ ಫಲಕ ಹಾಕಲು ಸರ್ಕಾರ ಸಜ್ಜಾಗಿದೆ.
ದೇವಸ್ಥಾನದ ಹುಂಡಿ ಹಣ ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುವುದು. ದೇವಾಲಯದ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಫಲಕ ಹಾಕಲಾಗುತ್ತದೆ. ರಾಜ್ಯದ 36,000 ದೇವಸ್ಥಾನಗಳಲ್ಲಿ ಇಂತಹ ಫಲಕ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ದೇವಾಲಯದ ಹಣವನ್ನು ಮಸೀದಿ, ಚರ್ಚುಗಳಿಗೆ ಬಳಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಇಂತಹ ಫಲಕ ಅಳವಡಿಸಲಾಗುವುದು. ದೇವಾಲಯಗಳಿಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.