ಬೆಂಗಳೂರು: ಲಿಂಗಾಯಿತ, ಒಕ್ಕಲಿಗರ ಹೋರಾಟದ ಎಚ್ಚರಿಕೆಗೆ ಮಣಿದ ಸರ್ಕಾರ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡಿದೆ.
ಬಸವಣ್ಣನವರ ಕುರಿತ ವಿವರ ತೆಗೆದು ಪರಿಷ್ಕರಣೆ, ಇtರೆ ಆಕ್ಷೇಪಾರ್ಹ ಅಂಶ ಪರಿಷ್ಕರಣೆಗೆ ಕ್ರಮಕೈಗೊಳ್ಳಲಾಗುತ್ತದೆ. ರಾಷ್ಟ್ರಕವಿ ಕುವೆಂಪು ನಾಡಗೀತೆ ವಿರೂಪಗೊಳಿಸಿದವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ಬಳಿಕ ತಡರಾತ್ರಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರೋಹಿತ್ ಚಕ್ರತಿರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಕಾರ್ಯ ಮುಗಿದಿರುವುದರಿಂದ ಈ ಸಮಿತಿಯನ್ನು ವಿಸರ್ಜಿಸಲಾಗುವುದು. ಬಸವಣ್ಣ ಅಂಶ ತಿದ್ದುಪಡಿ ಹೊರತುಪಡಿಸಿ ಉಳಿದ ಪರಿಷ್ಕೃತ ವನ್ನು ಯಥಾವತ್ ಜಾರಿಗೊಳಿಸಲಾಗುವುದು.
ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿ ಕುವೆಂಪು ಕುರಿತು ಇದ್ದ 7 ಪಠ್ಯಗಳನ್ನು 10ಕ್ಕೆ ಏರಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಕುರಿತ ಪಠ್ಯ ಹೊಸದಾಗಿ ಸೇರ್ಪಡೆ ಮಾಡಲಾಗುವುದು. ಇಸ್ಲಾಂ, ಕ್ರೈಸ್ತ, ಧರ್ಮದ ಜೊತೆಗೆ ಹಿಂದೂ ಧರ್ಮದ ಪಾಠ ಕೂಡ ಸೇರ್ಪಡೆ ಮಾಡಲಾಗುವುದು ಎಂದು ಹೇಳಲಾಗಿದೆ.