ಗಡಿಯಲ್ಲಿ ಭಾರತ ಸೇನೆಯನ್ನು ಮಣಿಸಲು ಸಾಧ್ಯವಾಗದ ಪಾಕಿಸ್ತಾನ, ಬೇರೆ ಮಾರ್ಗವನ್ನು ಹಿಡಿದಿದೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಅಪನಂಬಿಕೆಯನ್ನು ಹರಡಲು ಪಾಕಿಸ್ತಾನ ಇಂಟರ್ನೆಟ್ ದಾರಿ ಹಿಡಿದಿದೆ.
ಪಾಕಿಸ್ತಾನದ ಈ ನೀಚ ಕೃತ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಮೊದಲ ಬಾರಿಗೆ 2 ಸುದ್ದಿ ವೆಬ್‌ಸೈಟ್‌ಗಳು ಮತ್ತು 20 ಯೂಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧ ಹೇರಿದೆ. ಪಾಕಿಸ್ತಾನ, ಭಾರತದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಡುತ್ತಿತ್ತು. ಇದಕ್ಕಾಗಿ ಈ ಕ್ರಮವೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಇಂಟರ್ನೆಟ್ ಮೂಲಕ ಭಾರತ ವಿರೋಧಿ ಚಟುವಟಿಕೆ ಪ್ರೋತ್ಸಾಹ ನೀಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿ ಕುಳಿತಿರುವ ಕೆಲ ದುಷ್ಟರು ಯೂಟ್ಯೂಬ್ ಮೂಲಕ ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ.
15 ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿರುವ ‘ನಯಾ ಪಾಕಿಸ್ತಾನ್ ಗ್ರೂಪ್’ ಭಾರತದತ್ತ ಗಮನ ಹರಿಸಿದೆ. ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳಲ್ಲಿ ಭಾರತ ವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಸುದ್ದಿ ನೆಪದಲ್ಲಿ ಭಾರತದ ಪ್ರತಿಷ್ಠೆ ಕೆಡಿಸುವ ಕೆಲಸವಾಗ್ತಿದೆ.