alex Certify ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಸಿಗಲಿದೆ 30 ದಿನಗಳ ಬೋನಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಸಿಗಲಿದೆ 30 ದಿನಗಳ ಬೋನಸ್

ಕೇಂದ್ರ ಸರ್ಕಾರ, 2020-21ನೇ ಸಾಲಿನ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನಕ್ಕೆ ಸಮನಾದ ಉತ್ಪಾದಕವಲ್ಲದ ಲಿಂಕ್ಡ್ ಬೋನಸ್ ನೀಡಲು ಅನುಮೋದನೆ ನೀಡಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಬಿ ಯ ಎಲ್ಲ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಈ ಬೋನಸ್ ಸಿಗಲಿದೆ.

ಹಣಕಾಸು ಸಚಿವಾಲಯದ ಪ್ರಕಾರ, ಉತ್ಪಾದಕವಲ್ಲದ ಲಿಂಕ್ಡ್ ಬೋನಸ್ ಲೆಕ್ಕಾಚಾರದ ಮಿತಿಯು ತಿಂಗಳಿಗೆ 7000 ರೂಪಾಯಿಯಾಗಿರುತ್ತದೆ. ತಾತ್ಕಾಲಿಕ ಬೋನಸ್ ಪಾವತಿಯನ್ನು ಕೇಂದ್ರ ಪ್ಯಾರಾ ಮಿಲಿಟರಿ ಪಡೆಗಳು ಮತ್ತು ಸಶಸ್ತ್ರ ಪಡೆಗಳ ಅರ್ಹ ಉದ್ಯೋಗಿಗಳಿಗೆ ನೀಡಲಾಗುವುದು. ಕೇಂದ್ರ ಸರ್ಕಾರದ ಉದ್ಯೋಗಿಗಳ ಮಾದರಿಯನ್ನು ಅನುಸರಿಸುವ ಕೇಂದ್ರಾಡಳಿತ ಪ್ರದೇಶಗಳ ಉದ್ಯೋಗಿಗಳಿಗೆ ನೀಡಲಾಗುವುದು.

31-3-2021ರ ತನಕ ಸೇವೆಯಲ್ಲಿದ್ದ ಮತ್ತು 2020-21ರ ಅವಧಿಯಲ್ಲಿ ಕನಿಷ್ಠ ಆರು ತಿಂಗಳ ನಿರಂತರ ಸೇವೆಯನ್ನು ಸಲ್ಲಿಸಿದ ಉದ್ಯೋಗಿಗಳು ಮಾತ್ರ ತಾತ್ಕಾಲಿಕ ಬೋನಸ್‌ಗೆ ಅರ್ಹರಾಗಿರುತ್ತಾರೆ. ಒಂದು ದಿನದ ತಾತ್ಕಾಲಿಕ ಬೋನಸ್ ಅನ್ನು ಲೆಕ್ಕಹಾಕಲು, ಒಂದು ವರ್ಷದ ಸರಾಸರಿ ವೇತನಗಳನ್ನು 30.4 ರಿಂದ ಭಾಗಿಸಲಾಗುತ್ತದೆ. ಬೋನಸ್ ನೀಡಿದ ದಿನಗಳ ಸಂಖ್ಯೆಯಿಂದ ಗುಣಿಸಲಾಗುವುದು. ವ್ಯಕ್ತಿ 7 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರೆ ಆತನಿಗೆ 6908 ರೂಪಾಯಿ ಬೋನಸ್ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...