alex Certify 9, 10, 11, 12ನೇ ತರಗತಿ ಶಿಕ್ಷಣದಲ್ಲಿ ಭಾರೀ ಬದಲಾವಣೆ: ಆರ್ಟ್ಸ್, ಸೈನ್ಸ್, ಕಾಮರ್ಸ್ ಮಿಶ್ರಣ: ಸಬ್ಜೆಕ್ಟ್ ಹೆಚ್ಚಳ, ಸೆಮಿಸ್ಟರ್ ಪದ್ಧತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9, 10, 11, 12ನೇ ತರಗತಿ ಶಿಕ್ಷಣದಲ್ಲಿ ಭಾರೀ ಬದಲಾವಣೆ: ಆರ್ಟ್ಸ್, ಸೈನ್ಸ್, ಕಾಮರ್ಸ್ ಮಿಶ್ರಣ: ಸಬ್ಜೆಕ್ಟ್ ಹೆಚ್ಚಳ, ಸೆಮಿಸ್ಟರ್ ಪದ್ಧತಿ

ನವದೆಹಲಿ: 10 ಮತ್ತು 12ನೇ ತರಗತಿಯ ಪರೀಕ್ಷೆಗೆ ಹಿಂದಿನ ಕ್ಲಾಸ್ ಅಂಕಗಳನ್ನು ಪರಿಗಣಿಸುವುದು, ಪಿಯುಸಿಯಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್ ವಿಷಯಗಳ ಮಿಶ್ರಣ, ದ್ವಿತೀಯ ಪಿಯುಸಿಗೆ ಎರಡು ಬಾರಿ ಮುಖ್ಯ ಪರೀಕ್ಷೆ ಸೇರಿದಂತೆ 10 ನೇ ತರಗತಿ ಮತ್ತು ಪಿಯುಸಿ ಶಿಕ್ಷಣದಲ್ಲಿ ಭಾರಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರ ಕರಡು ಪೂರ್ವ ಪಠ್ಯ ಕ್ರಮ ಬಿಡುಗಡೆ ಮಾಡಿದೆ. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಹಿಂದಿನ 10 +2 ನೀತಿಯ ಬದಲಾಗಿ 5+3+3+4 ಪದ್ಧತಿ ಜಾರಿಗೆ ತರಲಾಗುತ್ತದೆ. 11 ಮತ್ತು 12ನೇ ತರಗತಿ ಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಸೆಮಿಸ್ಟರ್ ಪದ್ಧತಿ ಜಾರಿಗೆ ತರಲಾಗುವುದು.

10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನದ ಸಂದರ್ಭದಲ್ಲಿ ಹಿಂದಿನ ತರಗತಿಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂದರೆ 10ನೇ ತರಗತಿಗೆ 9ನೇ ತರಗತಿಯ ಅಂಕಗಳು ಹಾಗೂ 12ನೇ ತರಗತಿಗೆ 11ನೇ ತರಗತಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

11 ಮತ್ತು 12ನೇ ತರಗತಿಗೆ ಒಟ್ಟು 16 ವಿಷಯಗಳನ್ನು ಓದಬೇಕಿದೆ. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಹೀಗಿರುವ 5 ವಿಷಯದ ಬದಲು 8 ವಿಷಯಗಳನ್ನು ಓದುವ ಜೊತೆಗೆ ಕಡ್ಡಾಯವಾಗಿ ಪಾಸ್ ಆಗಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...