alex Certify BIG NEWS: ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ವಿಶ್ವ ದರ್ಜೆಯ ‘ಸ್ವಿಫ್ಟ್ ಸಿಟಿ’ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ವಿಶ್ವ ದರ್ಜೆಯ ‘ಸ್ವಿಫ್ಟ್ ಸಿಟಿ’ ನಿರ್ಮಾಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಮಾದರಿಯಲ್ಲಿ ಮತ್ತೊಂದು ಹೊಸ ಯೋಜಿತ ನಗರ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಸರ್ಜಾಪುರದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸ್ವಿಫ್ಟ್ ಸಿಟಿ ನಿರ್ಮಾಣ ಮಾಡಲಾಗುವುದು. ರಾಜ್ಯದಲ್ಲಿ ಕೈಗಾರಿಕೆಗಳು, ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಲು ಈ ನಗರ ನಿರ್ಮಾಣ ಮಾಡಲಾಗುತ್ತದೆ. ನವೋದ್ಯಮ, ಕೆಲಸದ ಸ್ಥಳಗಳು, ಬುದ್ಧಿ ಮತ್ತೆ, ಹಣಕಾಸು ಮತ್ತು ತಂತ್ರಜ್ಞಾನ ಸಂಬಂಧಿತ ಉದ್ಯಮಗಳನ್ನು ಸ್ಥಾಪಿಸಗುವುದು.

ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿಎಲ್ ಬಳಿಕ ಸರ್ಕಾರವೇ ಸ್ಥಾಪಿಸುತ್ತಿರುವ ಯೋಜಿತ ನಗರ ಸ್ವಿಫ್ಟ್ ಸಿಟಿ ಆಗಲಿದೆ. 150 ಮೀಟರ್ ಅಗಲದ ಸಂಪರ್ಕ ರಸ್ತೆ, ಸುಸಜ್ಜಿತ ಕಚೇರಿ, ವಸತಿ ವ್ಯವಸ್ಥೆ, ಶಾಲೆ ಸೇರಿ ವಿಶ್ವ ದರ್ಜೆಯ ಅಗತ್ಯ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಸ್ಟಾರ್ಟಪ್, ವರ್ಕ್ ಸ್ಪೇಸಸ್, ಇಂಟಲಿಜೆನ್ಸ್, ಫೈನಾನ್ಸ್ ಅಂಡ್ ಟೆಕ್ನಾಲಜಿಯ ಸಂಕ್ಷಿಪ್ತ ರೂಪ ಸ್ವಿಫ್ಟ್ ಸಿಟಿಯಾಗಿದ್ದು, ಉದ್ಯಮ ವಲಯಕ್ಕಾಗಿ ಸರ್ಕಾರ ಸ್ಥಾಪಿಸುತ್ತಿರುವ ಮೂರನೇ ಯೋಜಿತ ನಗರವಾಗಿದೆ. ಈ ಮೂಲಕ ಕೈಗಾರಿಕೆಗಳ ಬೆಳವಣಿಗೆಗೆ ವೇಗ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಮುಖ್ಯಾಂಶಗಳು

ಸರ್ಜಾಪುರದಲ್ಲಿ ‘ಸ್ವಿಫ್ಟ್ ಸಿಟಿ’ ಹಾಗೂ ರಾಜ್ಯಾದ್ಯಂತ ‘ಮಿನಿ ಕ್ವಿನ್ ಸಿಟಿ’ಗಳ ಅಭಿವೃದ್ಧಿ: ಕರ್ನಾಟಕವನ್ನು ‘ಸಿಲಿಕಾನ್ ರಾಜ್ಯ’ ಮಾಡುವತ್ತ ದೃಢ ಹೆಜ್ಜೆ

ನವೋದ್ಯಮಗಳು, ಕೆಲಸದ ಸ್ಥಳಗಳು, ಜ್ಞಾನ, ಹಣಕಾಸು & ತಂತ್ರಜ್ಞಾನ ಕ್ಷೇತ್ರಗಳಿಗೆ ಒತ್ತು: ಸಾವಿರಾರು ಉದ್ಯೋಗಗಳ ಸೃಷ್ಟಿ

– 1,000 ಎಕರೆ ಪ್ರದೇಶ | NH 44 ಹಾಗೂ NH 48ಗೆ ಉತ್ತಮ ಸಂಪರ್ಕ, ಐಟಿ ಹಬ್‌ಗಳಿಗೆ ಸಮೀಪ

– 8 ರಿಂದ 10 ಪ್ಲಗ್ & ಪ್ಲೇ ಸೌಲಭ್ಯಗಳು (ತಲಾ 20-25 ಎಕರೆ)

– 150 ಮೀ. ಅಗಲದ ಸಂಪರ್ಕ ರಸ್ತೆಗಳು, ಅತ್ಯಾಧುನಿಕ ಕಚೇರಿಗಳು, ಕೋ-ವರ್ಕಿಂಗ್ ಸ್ಥಳಗಳು, ವಸತಿ ವ್ಯವಸ್ಥೆ & ಶಾಲೆಗಳು

– ನವೋದ್ಯಮಗಳಿಗೆ ಗುತ್ತಿಗೆ, ಮಾರಾಟ ಅಥವಾ ಈಕ್ವಿಟಿ-ಹಂಚಿಕೆ ಆಧಾರದಲ್ಲಿ 5,000 ದಿಂದ 20,000 ಚದರಡಿವರೆಗೂ ಭೂಮಿ ಹಂಚಿಕೆ

– ಕರ್ನಾಟಕವನ್ನು ‘ಸಿಲಿಕಾನ್ ರಾಜ್ಯ’ಮಾಡುವ ಉದ್ದೇಶದೊಂದಿಗೆ ಬೆಂಗಳೂರಿನ ಯಶಸ್ಸನ್ನು ವಿಜಯಪುರ, ಹುಬ್ಬಳ್ಳಿ-ಧಾರವಾಡ ಒಳಗೊಂಡಂತೆ 5 ಮಿನಿ ಕ್ವಿನ್ ಸಿಟಿಗಳ ಮೂಲಕ ವಿಸ್ತರಿಸುವುದು

– ಮುಂಬರುವ #GIM2025ನಲ್ಲಿ ಹೆಚ್ಚಿನ ವಿವರಗಳ ಅನಾವರಣ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...