ಬೆಂಗಳೂರು: 150 ಇಂಜಿನಿಯರ್ ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಬಿಬಿಎಂಪಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಸುಗಮ ಕಾರ್ಯನಿರ್ವಹಣೆಯ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳಲ್ಲಿ 150 ಸಹಾಯಕ ಮತ್ತು ಕಿರಿಯ ಸಿವಿಲ್ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಬಿಬಿಎಂಪಿ ವಿವಿಧ ಕಾಮಗಾರಿ ಅನುಷ್ಠಾನ ಇನ್ನಿತರ ಕಾರ್ಯಗಳಿಗೆ ಇಂಜಿನಿಯರ್ ಕೊರತೆ ಇರುವ ಕಾರಣ ನೇರ ನೇಮಕ ಮಾಡಿಕೊಳ್ಳಲು ವಿಶೇಷ ನಿಯಮಾವಳಿ ರೂಪಿಸುವ ಬಗ್ಗೆ 2021ರಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮೊದಲ ಹಂತದಲ್ಲಿ ಕೆ.ಪಿ.ಎಸ್.ಸಿ. ಮೂಲಕ ನೇರ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ. 100 ಸಹಾಯಕ ಇಂಜಿನಿಯರ್(ಸಿವಿಲ್), 50 ಕಿರಿಯ ಇಂಜಿನಿಯರ್(ಸಿವಿಲ್)ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಇದಕ್ಕೆ ಆರ್ಥಿಕ ಇಲಾಖೆಯಿಂದ ಅನುಮತಿ ನೀಡಲಾಗಿದೆ.