ಬೆಂಗಳೂರು: 2023 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಾಗಿ ಇಲಾಖೆಯ ಕಾರ್ಯದರ್ಶಿ, ಪ್ರೊ. ಜಾಣಗೆರೆ ವೆಂಕಟರಾಮಯ್ಯ, ಡಾ. ಹೆಚ್.ಎಲ್. ಪುಷ್ಪಾ, ಡಾ. ವೀರಣ್ಣ ದಂಡೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ. ಚಿಕ್ಕಣ್ಣ, ಡಾ. ಸಿ.ಆರ್. ಚಂದ್ರಶೇಖರ್, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಡಾ. ಕೃಷ್ಣಮೂರ್ತಿ ಹನೂರು, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್, ಡಾ. ವಿಠಲ್ ಐ. ಬೆಣಗಿ, ಡಾ. ಸಣ್ಣರಾಮು, ವೆಂಕಟರಮಣಯ್ಯ, ಡಾ. ಎಂ.ಎಸ್. ಮೂರ್ತಿ, ಡಾ. ಗೀತಾ ಶಿವಮೊಗ್ಗ, ಡಾ. ಜಯದೇವಿ ಜಂಗಮ ಶೆಟ್ಟಿ, ಐಕೋಡಿ ಗೋವಿಂದಪ್ಪ, ಸಾಧುಕೋಕಿಲ, ರೀತು ಅಬ್ರಹಾಂ, ಸುಕನ್ಯಾ ಪ್ರಭಾಕರ್, ಫಯಾಜ್ ಖಾನ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್. ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಜೆ. ಲೋಕೇಶ್ ಸದಸ್ಯರಾಗಿರುತ್ತಾರೆ.
ಪದ ನಿಮಿತ್ತ ಸದಸ್ಯರಾಗಿ ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.