
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಆಚರಿಸುವ 31 ಮಹಾಪುರುಷರ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮಗಳನ್ನು 2023 -24ನೇ ಸಾಲಿನಲ್ಲಿ ಬೆಂಗಳೂರಿನ ಬದಲಿಗೆ ವಿವಿಧ ಜಿಲ್ಲೆಗಳಲ್ಲಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಜಗಜ್ಯೋತಿ ಬಸವೇಶ್ವರರು, ನಾಡಪ್ರಭು ಕೆಂಪೇಗೌಡ, ಭಗವಾನ್ ಮಹಾವೀರ ಸೇರಿದಂತೆ ಮಹನೀಯರ ಜಯಂತಿಗಳನ್ನು ಯಾವ ಜಿಲ್ಲೆಗಳಲ್ಲಿ ಆಚರಿಸಬೇಕೆಂದು ದಿನಾಂಕ ಸಹಿತ ನಡಾವಳಿ ಪ್ರಕಟಿಸಲಾಗಿದೆ.
ರಾಜ್ಯ ಮಟ್ಟದ ಜಯಂತಿಗಳಿಗೆ ಆಯಾ ಜಿಲ್ಲಾಡಳಿತಗಳಿಗೆ ತಲಾ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಮಟ್ಟದ ಜಯಂತಿ ಕಾರ್ಯಕ್ರಮಗಳಿಗೆ 50,000 ರೂ., ತಾಲೂಕು ಮಟ್ಟದ ಆಚರಣೆಗೆ 20 ಸಾವಿರ ರೂಪಾಯಿ ಅನುದಾನ ನೀಡಲಾಗಿದೆ.
ಜೂನ್ 4 ಮಂಡ್ಯ -ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ
ಜೂನ್ 27 ಹಾಸನ -ನಾಡಪ್ರಭು ಕೆಂಪೇಗೌಡ ಜಯಂತಿ
ಜುಲೈ 2 ವಿಜಯಪುರ -ಡಾ.ಫ.ಗು. ಹಳಕಟ್ಟಿ ಜನ್ಮದಿನ
ಜುಲೈ 3 ಧಾರವಾಡ -ಹಡಪದ ಅಪ್ಪಣ್ಣ ಜಯಂತಿ
ಆಗಸ್ಟ್ 31 ಬೆಂಗಳೂರು ಗ್ರಾಮಾಂತರ -ನುಲಿಯ ಚಂದಯ್ಯ ಜಯಂತಿ
ಆಗಸ್ಟ್ 31 ಉಡುಪಿ -ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
ಸೆಪ್ಟೆಂಬರ್ 6 ದಕ್ಷಿಣ ಕನ್ನಡ -ಶ್ರೀ ಕೃಷ್ಣ ಜಯಂತಿ
ಸೆಪ್ಟೆಂಬರ್ 17 ವಿಜಯನಗರ -ವಿಶ್ವಕರ್ಮ ಜಯಂತಿ
ಅಕ್ಟೋಬರ್ 23 ಬೆಳಗಾವಿ -ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ನವೆಂಬರ್ 11 ದಾವಣಗೆರೆ -ವೀರರಾಣಿ ಒನಕೆ ಓಬವ್ವ ಜಯಂತಿ
ನವೆಂಬರ್ 30 ಗದಗ -ಕನಕ ಜಯಂತಿ
ಡಿಸೆಂಬರ್ 29 ಮೈಸೂರು -ವಿಶ್ವಮಾನವ ದಿನಾಚರಣೆ
ಜನವರಿ 1 ತುಮಕೂರು -ಜಕಣಾಚಾರಿ ಜಯಂತಿ
ಜನವರಿ 15 ಚಿತ್ರದುರ್ಗ -ಶಿವಯೋಗಿ ಸಿದ್ದರಾಮ ಜಯಂತಿ
ಜನವರಿ 19 ರಾಯಚೂರು -ವೇಮನ ಜಯಂತಿ
ಜನವರಿ 21 ಉತ್ತರ ಕನ್ನಡ -ಅಂಬಿಗರ ಚೌಡಯ್ಯ ಜಯಂತಿ
ಫೆಬ್ರವರಿ 1 ರಾಮನಗರ -ಮಡಿವಾಳ ಮಾಚಿದೇವ ಜಯಂತಿ
ಫೆಬ್ರವರಿ 15 ಯಾದಗಿರಿ -ಸಂತ ಸೇವಾಲಾಲ್ ಜಯಂತಿ
ಫೆಬ್ರವರಿ 19 ಬಾಗಲಕೋಟೆ -ಛತ್ರಪತಿ ಶಿವಾಜಿ ಜಯಂತಿ
ಫೆಬ್ರವರಿ 20 ಕೊಡಗು ಜಿಲ್ಲೆ -ಸಂತ ಕವಿ ಸರ್ವಜ್ಞ ಜಯಂತಿ
ಮಾರ್ಚ್ 16 ಹಾವೇರಿ -ರೇಣುಕಾಚಾರ್ಯರ ಜಯಂತಿ ಆಚರಿಸಲು ತಿಳಿಸಲಾಗಿದೆ.
ರಥಸಪ್ತಮಿ ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಿಸಲಾಗುತ್ತದೆ. ಶಿವರಾತ್ರಿ ದಿನ ಕೊಪ್ಪಳ ಜಿಲ್ಲೆಯಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಗುವುದು. ಕಲಬುರ್ಗಿ ಜಿಲ್ಲೆಯಲ್ಲಿ 2024ನೇ ಕ್ಯಾಲೆಂಡರ್ ಅನ್ವಯ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಗುವುದು ಎಂದು ಹೇಳಲಾಗಿದೆ.