ನವದೆಹಲಿ: ರೋಗಿಗಳಿಗೆ ಜೆನೆರಿಕ್ ಔಷಧ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಆಸ್ಪತ್ರೆಗಳಿಗೆ ವೈದ್ಯಕೀಯ ಪ್ರತಿನಿಧಿಗಳು ಆಗಮಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಕೇವಲ ಇ-ಮೇಲ್ ಮೂಲಕವೇ ಹೊಸ ಔಷಧ ಲಾಂಚ್ ಆದ ವಿಷಯ ತಿಳಿಯಬೇಕು ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳು ಮತ್ತು ಯೋಗ ಕ್ಷೇಮ ಕೇಂದ್ರಗಳಿಗೆ ಎಚ್ಚರಿಕೆ ನೀಡಲಾಗಿದೆ.
ರೋಗಿಗಳಿಗೆ ಬ್ರಾಂಡೆಡ್ ಔಷಧ ಸೂಚಿಸುತ್ತಿರುವುದನ್ನು ಸರ್ಕಾರ ಗಮನಿಸಿದ್ದು, ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜೆನೆರಿಕ್ ಔಷಧ ಶಿಫಾರಸು ಮಾಡಬೇಕು. ಆಸ್ಪತ್ರೆಗಳಿಗೆ ವೈದ್ಯಕೀಯ ಪ್ರತಿನಿಧಿಗಳು ಬರುವುದನ್ನು ಸಂಪೂರ್ಣ ತಡೆಯಬೇಕೆಂದು ಸೂಚಿಸಲಾಗಿದೆ.