
ಪಾನ್ ಕಾರ್ಡ್‌ಗಳಿಗೆ ಆಧಾರ್ ಲಿಂಕಿಂಗ್ ಮಾಡುವ ಬಗ್ಗೆ ಪದೇ ಪದೇ ಸುತ್ತೋಲೆ ಹೊರಡಿಸುತ್ತಲೇ ಇರುವ ಹಣಕಾಸು ಸಚಿವಾಲಯ, ಈ ವಿಚಾರವಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಅಂಚೆ ಕಚೇರಿ ಉಳಿತಾಯ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಸೇರಿದಂತೆ ಅನೇಕ ಸಣ್ಣ ಉಳಿತಾಯ ಯೋಜನೆಗಳಿಗೆ ಪಾನ್-ಆಧಾರ್ ಲಿಂಕಿಂಗ್ ಅನ್ನು ಕಡ್ಡಾಯಗೊಳಿಸುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಈ ನಿಟ್ಟಿನಲ್ಲಿ ಮಾರ್ಚ್ 31, 2023ರಂದು ಸುತ್ತೋಲೆ ಹೊರಡಿಸಲಾಗಿದೆ. ಇನ್ನು ಮುಂದೆ ಆಧಾರ್ ನೋಂದಾಯಿತ ಪಾನ್ ಕಾರ್ಡ್ ಇಲ್ಲದೇ ಮೇಲ್ಕಂಡ ಯೋಜನೆಗಳಲ್ಲಿ ಹೂಡಿಕೆ ಮಾಡುವಂತಿಲ್ಲ.
ಒಂದು ವೇಳೆ, ಆಧಾರ್ ನೋಂದಾಯಿತ ಪಾನ್ ಕಾರ್ಡ್ ಇಲ್ಲದೆಯೇ ಮೇಲ್ಕಂಡ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ, ಮುಂದಿನ ಆರು ತಿಂಗಳ ಅವಧಿಯೊಳಗೆ ಈ ಲಿಂಕಿಂಗ್ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಹೀಗೆ ಮಾಡದೇ ಇದ್ದಲ್ಲಿ, ಆಧಾರ್ ನೋಂದಾಯಿತ ಪಾನ್ ಕಾರ್ಡ್ ಸಲ್ಲಿಸುವವರೆಗೂ ಸಂಬಂಧಪಟ್ಟ ವ್ಯಕ್ತಿಯ ಮೇಲ್ಕಂಡ ಯೋಜನೆಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ಇಡಲಾಗುತ್ತದೆ ಎಂದು ತಿಳಿಸಲಾಗಿದೆ.